ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷ್ಣಜನಾಷ್ಟಮಿ: ಬೆಂಗಳೂರಿನ ಹಲವೆಡೆ 2 ದಿನ ವಾಹನ ಸಂಚಾರ ನಿರ್ಬಂಧ

Published 25 ಆಗಸ್ಟ್ 2024, 16:32 IST
Last Updated 25 ಆಗಸ್ಟ್ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಪ್ರಯುಕ್ತ ಸೋಮವಾರ ಮತ್ತು ಮಂಗಳವಾರ ನಗರದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಸಂಚಾರ ವಿಭಾಗದ ಪೊಲೀಸರು ಆದೇಶ ಹೊರಡಿಸಿದ್ದಾರೆ. 

ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳ ಬಗ್ಗೆ ಪೊಲೀಸರು ‘ಎಕ್ಸ್‌’ನಲ್ಲಿ ಮಾಹಿತಿ ನೀಡಿದ್ದಾರೆ.

ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರ ಮುಖ್ಯರಸ್ತೆಯಲ್ಲಿರುವ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪೂಜೆ ಮತ್ತು ರಥೋತ್ಸವ ಏರ್ಪಡಿಸಲಾಗಿದೆ.

ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸೋಮವಾರ ಬೆಳಿಗ್ಗೆ 8ರಿಂದ ಮಂಗಳವಾರ ಬೆಳಿಗ್ಗೆ 6ರವರೆಗೆ ನಿರ್ಬಂಧಿಸಲಾಗಿದೆ. ವಾಹನ ಸವಾರರಿಗೆ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ. 

ಪರ್ಯಾಯ ಮಾರ್ಗ: ಕೊಡಿಗೇಹಳ್ಳಿ ಮತ್ತು ಹೂಡಿ ಮುಖ್ಯರಸ್ತೆ ಕಡೆಯಿಂದ ದೇವಸಂದ್ರ ಮತ್ತು ಕೆ.ಆರ್.ಪುರ ಮಾರುಕಟ್ಟೆ ಕಡೆಗೆ ಸಂಚರಿಸುವ ವಾಹನ ಸವಾರರು ಜೈ ಭುವನೇಶ್ವರಿ ಜಂಕ್ಷನ್ ಲುಲೂಸ್ ಬೇಕರಿ ಹತ್ತಿರ ಬಲ ತಿರುವು ಪಡೆದು ಅಯ್ಯಪ್ಪನಗರ ಮುಖ್ಯರಸ್ತೆ – ಬಸವನಪುರ ಮುಖ್ಯರಸ್ತೆ ಭಟ್ಟರಹಳ್ಳಿ ಜಂಕ್ಷನ್ ಮೂಲಕ ಕೆ.ಆರ್.ಪುರ ಮಾರುಕಟ್ಟೆ ಕಡೆಗೆ ಸಂಚರಿಸಬೇಕು.

ಕೆ.ಆರ್.ಪುರ ಮಾರುಕಟ್ಟೆ ಕಡೆಯಿಂದ ಕೊಡಿಗೇಹಳ್ಳಿ ಮತ್ತು ಹೂಡಿ ಮುಖ್ಯರಸ್ತೆ ಕಡೆಗೆ ಸಂಚರಿಸುವ ವಾಹನ ಸವಾರರು ಜಿ.ಆರ್.ಟಿ. ಹತ್ತಿರ ಬಲ ತಿರುವು ಪಡೆದು ಬಸವನಪುರ ಮುಖ್ಯರಸ್ತೆಯಲ್ಲಿ (ಕೃಷ್ಣ ಟಾಕೀಸ್ ರಸ್ತೆ) ಸಂಚರಿಸಿ ಭಟ್ಟರಹಳ್ಳಿ ಜಂಕ್ಷನ್ ಮೂಲಕ ಸಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT