ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿ ಕಾರಂತ್‌ಗೆ ‘ಪರಿಸರ ಕಣ್ಮಣಿ’ ಪ್ರಶಸ್ತಿ

Last Updated 30 ಸೆಪ್ಟೆಂಬರ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಪರಿಸರ ವಿಜ್ಞಾನಿ, ಬೆಂಗಳೂರಿನ ಡಾ.ಕೃತಿ ಕಾರಂತ್‌ ಅವರು ‘ಪರಿಸರ ಕಣ್ಮಣಿ’ (ಎನ್ವಿರಾನ್ಮೆಂಟಲ್‌ ಹೀರೊ) ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಪರಿಸರ ಸಂರಕ್ಷಣೆಗೆ ಕೃತಿಯವರು ನೀಡಿರುವ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

‘ಜಿಕ್ಯೂ 2019ರ ಸಾಧಕರು’ ಪ್ರಶಸ್ತಿಯ 11ನೇ ಆವೃತ್ತಿಯಲ್ಲಿ ಕೃತಿಯವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಸೆ.28ರಂದು ಮುಂಬೈನಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು.

ಪ್ರಸ್ತುತ ಕೃತಿಯವರು ಬೆಂಗಳೂರಿನ ವನ್ಯಜೀವಿ ಅಧ್ಯಯನ ಕೇಂದ್ರದಲ್ಲಿ (ಸಿಡಬ್ಲ್ಯುಎಸ್‌) ಮುಖ್ಯ ವನ್ಯಜೀವಿ ಸಂರಕ್ಷಣಾ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಉದ್ಯಮ, ಮನರಂಜನೆ, ಮಾಧ್ಯಮ, ಕಲೆ ಮತ್ತು ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ.

ರಾಹುಲ್‌ ದ್ರಾವಿಡ್, ಎ.ಆರ್. ರೆಹಮಾನ್, ದೀಪಿಕಾ ಪಡುಕೋಣೆ, ಕೇಶವ್‌ ಸೂರಿ, ಕುಮಾರಮಂಗಲಂ ಬಿರ್ಲಾರಂತಹ ಸಾಧಕರು ಈ ‘ಜಿಕ್ಯೂ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT