ಅಂಡರ್‌ಪಾಸ್‌ನಲ್ಲಿ ನೀರು ವಾಹನ ಸವಾರರ ‍ಪರದಾಟ

7

ಅಂಡರ್‌ಪಾಸ್‌ನಲ್ಲಿ ನೀರು ವಾಹನ ಸವಾರರ ‍ಪರದಾಟ

Published:
Updated:

ಬೆಂಗಳೂರು: ಕೆ.ಆರ್.ಪುರ ಸಮೀಪದ ವಿಜಿನಾಪುರ ರೈಲ್ವೆ ಅಂಡರ್‌ಪಾಸ್‌ನಲ್ಲಿ ನಾಲ್ಕು ದಿನಗಳಿಂದ ಮಳೆ ನೀರು ನಿಂತಿರುವುದರಿಂದ ವಾಹನ ಸವಾರರು ನಿತ್ಯ ನರಕ ಅನುಭವಿಸುತ್ತಿದ್ದಾರೆ.

ವಿಜಿನಾಪುರದಿಂದ– ಟಿನ್‌ ಫ್ಯಾಕ್ಟರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಅಂಡರ್‌ಪಾಸ್‌ ಅನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು, ಮಳೆ ಬಂದಾಗಲೆಲ್ಲ ಇಲ್ಲಿ ನೀರು ಸಂಗ್ರಹವಾಗುತ್ತಿದೆ. ನೀರಿನ ಹರಿಯುವಿಕೆಗೆ ಸೂಕ್ತ ವ್ಯವಸ್ಥೆ ಮಾಡದ ಕಾರಣ, ಪ್ರತಿ ಬಾರಿ ಮಳೆ ಬಂದಾಗಲೂ ಸ್ಥಳೀಯರೇ ಪಂಪ್‌ಸೆಟ್‌ಗಳನ್ನಿಟ್ಟು ನೀರನ್ನು ಹೊರಚೆಲ್ಲುತ್ತಿದ್ದಾರೆ.

ಇತ್ತೀಚೆಗೆ ಸುರಿದ ಮಳೆಗೆ ಅಂಡರ್‌ಪಾಸ್ ತುಂಬಿ ಹೋಗಿದೆ. ಜನ ಕೂಡ ನೀರನ್ನು ತೆಗೆಯಲು ಮುಂದಾಗಿಲ್ಲ. ಇದರಿಂದಾಗಿ ಸವಾರರು ತೀವ್ರ ಸಂಕಷ್ಟಲ್ಲಿ ಸಿಲುಕಿದ್ದಾರೆ. ರಾಮಮೂರ್ತಿನಗರ ಅಂಡರ್‌ಪಾಸ್‌ನಲ್ಲೂ ಇದೇ ಪರಿಸ್ಥಿತಿಯಿದ್ದು, ಸಂಚಾರ ದಟ್ಟಣೆ ವಿಪರೀತವಾಗಿದೆ ಎಂಬುದು ಸ್ಥಳೀಯರ ಅಳಲು.

‘ಇಳಿಜಾರಿನ ರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳು, ಅಂಡರ್‌ಪಾಸ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ನೀರಿನ ಮಧ್ಯೆ ಸಾಗಲಾಗದೆ, ಬೈಕ್‌ಗಳನ್ನು ತಳ್ಳಿಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿವೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು’ ಎಂದು ಸ್ಥಳೀಯ ನಿವಾಸಿ ಅಂಬರೀಷ್ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !