ಗುರುವಾರ , ನವೆಂಬರ್ 14, 2019
22 °C

ಡೀಸೆಲ್ ಟ್ಯಾಂಕರ್‌ಗಳಿಗೆ ಡಿಜಿಟಲ್ ಲಾಕಿಂಗ್ ವ್ಯವಸ್ಥೆ

Published:
Updated:
Prajavani

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಇಂಧನ ಪೂರೈಸುವ ಡೀಸೆಲ್ ಟ್ಯಾಂಕರ್‌ಗಳಿಗೆ ಡಿಜಿಟಲ್ ಲಾಕಿಂಗ್‌ ವ್ಯವಸ್ಥೆ ಅಳವಡಿಕೆಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್‌) ಸಹಯೋಗದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಜಿಪಿಎಸ್‌ ಆಧಾರಿತ ಲಾಕಿಂಗ್ ವ್ಯವಸ್ಥೆ ಇದಾಗಿದ್ದು, ಬಿಪಿಸಿಎಲ್‌ನಲ್ಲಿ ಇಂಧನ ತುಂಬಿಸಿದ ನಂತರ ನಿಗಮಕ್ಕೆ ಬರುವ ತನಕ ಸಾಗಣೆ ಹಂತದಲ್ಲಿ ಇಂಧನ ಸೋರಿಕೆ ಆಗುವುದನ್ನು ತಡೆಯಬಹುದು. ನಿಗಮದ ಡಿಪೋಗೆ ಬಂದ ನಂತರ ಒಟಿಪಿ ತಾಳೆಯಾದರೆ ಮಾತ್ರ ಟ್ಯಾಂಕರ್‌ನ ಮುಚ್ಚಳ ತೆರೆಯಲು ಸಾಧ್ಯವಾಗಲಿದೆ. 

ಲಾಕಿಂಗ್ ಸಿಸ್ಟಂ ಅಳವಡಿಸುವ ಕಾರ್ಯಾಗಾರ ಉದ್ಘಾಟಿಸಿದ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ, ‘ಕೆಎಸ್‌ಆರ್‌ಟಿಸಿ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿದ್ದು, ಈ ಲಾಕಿಂಗ್ ವ್ಯವಸ್ಥೆ ಕೂಡ ಮೊದಲು ಅಳವಡಿಸಿಕೊಂಡ ಸಾರಿಗೆ ಸಂಸ್ಥೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)