ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುವೆಂಪು ಸಮಗ್ರ’ ಸಾಹಿತ್ಯ ಸರಣಿ, ಡಿಜಿಟಲ್ ಸ್ಪರ್ಶ

Last Updated 2 ನವೆಂಬರ್ 2020, 18:26 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯ ಪುಸ್ತಕಗಳ ಸರಣಿ ಹಾಗೂ ಅದರ ಡಿಜಿಟಲ್ ಆವೃತ್ತಿಯನ್ನು ಕರ್ನಾಟಕ ರಾಜ್ಯೋತ್ಸವ ದಿನವಾದ ವಿಧಾನಸೌಧದಲ್ಲಿ ಭಾನುವಾರ ಲೋಕಾರ್ಪಣೆಗೊಳಿಸಲಾಯಿತು

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗ ಹೊರತಂದಿರುವ ‘ಕುವೆಂಪು ಸಮಗ್ರ’ ಸಾಹಿತ್ಯ ಪುಸ್ತಕಗಳ ಸರಣಿ ಮತ್ತು ಡಿಜಿಟಲ್ ಆವೃತ್ತಿಯನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಬಿಡುಗಡೆಗೊಳಿಸಿದರು.

12,000 ಪುಟಗಳ ಪುಸ್ತಕಗಳ ಸರಣಿಗೆ ₹ 10,000 ಬೆಲೆ ನಿಗದಿಪಡಿಸಲಾಗಿದ್ದು, ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಜೊತೆಗೆ, ಡಿಜಿಟಲ್‌ ಆವೃತ್ತಿಯ ಇ- ಪುಸ್ತಕಗಳನ್ನು ‘ಗೂಗಲ್ ಪ್ಲೇ ಬುಕ್ಸ್’ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಶೇ 20ರಷ್ಟು ಪಠ್ಯವನ್ನು ಉಚಿತವಾಗಿ ಓದಬಹುದು.

ಕನ್ನಡ ತಂತ್ರಜ್ಞಾನ ಅಭಿವೃದ್ಧಿ ತಂಡ ರಚನೆ: ‘ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ. ಇಂಥ ಸಾಹಿತ್ಯವನ್ನು ಡಿಜಿಟಲ್ ರೂಪಕ್ಕೆ ತಂದಿರುವುದು ಮಹತ್ವದ ಬೆಳವಣಿಗೆ. ಇದರಿಂದ ಹೆಚ್ಚು ಓದುಗರಿಗೆ ಸಾಹಿತ್ಯ ತಲುಪಿಸಲು ಅನುಕೂಲವಾಗಲಿದೆ’ ಎಂದು ಅಶ್ವತ್ಥನಾರಾಯಣ ಹೇಳಿದರು.

‘ಕನ್ನಡಿಗರು ಹಾಗೂ ಕನ್ನಡೇತರರ ನಡುವೆ ದಿನನಿತ್ಯದ ಸಂವಹನ ಹಾಗೂ ವ್ಯವಹಾರಗಳನ್ನು ಅಡೆತಡೆಯಿಲ್ಲದೆ ಕನ್ನಡದ ಮೂಲಕವೇ ನಡೆಸಲು ಸಾಧ್ಯವಾಗುವಂತೆ ಮಾಡಬೇಕಿದೆ. ಇದರ ಜೊತೆಗೆ ಇತರೆ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕನ್ನಡ ತಂತ್ರಜ್ಞಾನ ಅಭಿವೃದ್ಧಿ ತಂಡ ರಚಿಸಲು ತೀರ್ಮಾನಿಸಲಾಗಿದೆ. ‘ನವೋದ್ಯಮ ವಿಷನ್‌ ಗ್ರೂಪ್‌’ ನೇತೃತ್ವದಲ್ಲಿ ಈ ತಂಡ ಕೆಲಸ ಮಾಡಲಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT