ಬೆಂಗಳೂರು: ದೊಡ್ಡಬಿದರಕಲ್ಲು ವ್ಯಾಪ್ತಿಯ ಪ್ರದೇಶಗಳಿಗೆ ಕಾವೇರಿ ನೀರು ಸರಬರಾಜಿಗೆ ಅನುಕೂಲವಾಗಲು ಲಿಂಗಧೀರನಹಳ್ಳಿಯಲ್ಲಿ ನೆಲಮಟ್ಟದ ಜಲಾಶಯ (ಜಿಎಲ್ಆರ್) ಕಾಮಗಾರಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು,‘ಜಲಮಂಡಳಿ ವತಿಯಿಂದಈ ಕಾಮಗಾರಿ ನಡೆಯಲಿದೆ. ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಿದೆ.₹15.27 ಕೋಟಿ ವೆಚ್ಚದ ಈ ಕಾಮಗಾರಿಯನ್ನು 2023ರ ಜೂನ್ ವೇಳೆಗೆ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು’ ಎಂದರು.

‘ಯಶವಂತಪುರ ಕ್ಷೇತ್ರದಲ್ಲಿ ನೀರಿನ ಸಮಸ್ಯೆಗಳನ್ನು ಪೂರ್ಣವಾಗಿ ಬಗೆಹರಿಸುವ ಗುರಿ ಇದೆ. ಪ್ರಸ್ತುತ ಈಗ ಚಾಲನೆ ನೀಡಿರುವ ಯೋಜನೆಯಿಂದ ಈ ಭಾಗದ ನೀರಿನ ಸಮಸ್ಯೆ ನೀಗಲಿದೆ’ ಎಂದು ಹೇಳಿದರು.

ಹೇರೋಹಳ್ಳಿಯ ಕೆಎಸ್‌ಆರ್‌ಟಿಸಿ ಬಡಾವಣೆ, ಜೆಎಸ್ಎಸ್ ಕಾಲೇಜು ಹಾಗೂ ಹೆಮ್ಮಿಗೆಪುರದ ಪೌರಕಾರ್ಮಿಕರಿಗೆ ಪಡಿತರ ಕಿಟ್‌ಗಳನ್ನು ಸಚಿವ ಸೋಮಶೇಖರ್ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.