ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ‘ವ್ಯಂಗ್ಯದಲ್ಲಿನ ವಿಷಾದ ಎಂದಿಗೂ ಶ್ರೇಷ್ಠ’

ಬಿ.ಆರ್. ಲಕ್ಷ್ಮಣರಾವ್‌ ಅವರ ‘ನವೋನ್ಮೇಷ’ ಪುಸ್ತಕ ಬಿಡುಗಡೆ
Last Updated 9 ಸೆಪ್ಟೆಂಬರ್ 2020, 16:25 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿ.ಆರ್. ಲಕ್ಷ್ಮಣರಾವ್‌ ಅವರ ಬಹುತೇಕ ಕವಿತೆಗಳಲ್ಲಿ ಸೂಕ್ಷ್ಮವಾದ ವ್ಯಂಗ್ಯ ಇರುತ್ತದೆ ಮತ್ತು ಆ ವ್ಯಂಗ್ಯ ವಿಷಾದದಲ್ಲಿ ಕೊನೆಯಾಗುತ್ತದೆ. ಹೀಗೆ ವಿಷಾದದಲ್ಲಿ ಕೊನೆಯಾಗುವ ವ್ಯಂಗ್ಯ ಯಾವತ್ತೂ ಶ್ರೇಷ್ಠ’ ಎಂದು ನಿರ್ದೇಶಕ ಟಿ.ಎನ್. ಸೀತಾರಾಮ್ ಅಭಿಪ್ರಾಯಪಟ್ಟರು.

ಫೇಸ್‌ಬುಕ್‌ ಲೈವ್‌ನಲ್ಲಿ ಬುಧವಾರ ಲಕ್ಷ್ಮಣರಾವ್ ಅವರ ‘ನವೋನ್ಮೇಷ' ಕವನಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯಾವುದೇ ಕವಿತೆಯಾಗಲಿ ಅರ್ಥವಾಗುವ ರೀತಿಯಲ್ಲಿ ಲಕ್ಷ್ಮಣರಾವ್ ಬರೆಯುತ್ತಾರೆ. ಅವರ ಕವನಗಳಲ್ಲಿ ಆತ್ಮೀಯ–ಪ್ರೀತಿಯ ಭಾವಗಳು ಹೆಚ್ಚಾಗಿರುತ್ತವೆ’ ಎಂದರು.

ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ‘ಕೆ.ಎಸ್. ನರಸಿಂಹಸ್ವಾಮಿಯವರಂತೆಯೇ ಲಕ್ಷ್ಮಣರಾವ್ ಅವರು ಪ್ರೇಮಕವಿತೆಗಳನ್ನೇ ಹೆಚ್ಚಾಗಿ ಬರೆದಿದ್ದಾರೆ. ನರಸಿಂಹಸ್ವಾಮಿಯವರದು ಮರ್ಯಾದೆ ದಾಟದ ಪ್ರೀತಿಯಾದರೆ, ಲಕ್ಷ್ಮಣರಾವ್ ಅವರದು ಅಪಥ್ಯ ಪ್ರೀತಿ. ಅಂದರೆ ಪಥ್ಯವನ್ನು ಮೀರಿ ಕವಿತೆಗಳನ್ನು ರಚಿಸಿದ್ದಾರೆ. ಅವರಿಗೆ ವಯಸ್ಸಾದರೂ, ಕವಿತೆಗಳಿಗೆ ಯಾವತ್ತೂ ವಯಸ್ಸಾಗುವುದಿಲ್ಲ’ ಎಂದರು.

‘ಲಕ್ಷ್ಮಣರಾವ್ ಅವರ ಕವಿತೆಗಳಲ್ಲಿ ಪ್ರೀತಿಯ ಹೊರತಾಗಿ ಸಾಮಾಜಿಕ, ರಾಜಕೀಯ ಬದ್ಧ ನಿಲುವುಗಳು ಕಾಣುವುದಿಲ್ಲ. ಪ್ರೀತಿ–ಪ್ರೇಮದ ವಲಯವನ್ನು ದಾಟಿ, ಮಹಾಕವಿತೆ ಬರೆಯುವುದರ ಕಡೆಗೆ ಗಮನ ಹರಿಸಬೇಕು’ ಎಂದು ಪ್ರೀತಿಪೂರ್ವಕ ಸಲಹೆ ನೀಡಿದರು.

ಕವಿ ಜೋಗಿ, ‘ನವೋನ್ಮೇಷ ಎಂದರೆ ಹೊಸತು, ಹೊಸತಾಗಿ ಅರಳುವುದು, ಹೊಸ ಭಾವಗಳು ಎಂಬ ಅರ್ಥ ಬರುತ್ತದೆ. ಕನ್ನಡದ ಹೊಸ ಸಾಧ್ಯತೆಗಳನ್ನು ಲಕ್ಷ್ಮಣರಾವ್ ತೋರಿಸಿಕೊಟ್ಟಿದ್ದಾರೆ’ ಎಂದು ಪ್ರಶಂಸಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT