ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ ಉದ್ಯಾನಕ್ಕೆ ಲಗ್ಗೆಯಿಟ್ಟ ಮಾವು

ರೈತನಿಂದ ನೇರವಾಗಿ ಗ್ರಾಹಕರಿಗೆ ಮಾರಾಟ
Last Updated 7 ಮೇ 2022, 19:04 IST
ಅಕ್ಷರ ಗಾತ್ರ

ಬೆಂಗಳೂರು: ಮಾವಿನ ಅವಧಿ ಆರಂಭವಾಗಿರುವುದರಿಂದ ಲಾಲ್‌ಬಾಗ್‌ ಉದ್ಯಾನದಲ್ಲಿ ತರಹೇವಾರಿ ಮಾವಿನ ಮಾರಾಟ ಶುರುವಾಗಿದೆ. ಕೋಲಾರದ ರೈತರೊಬ್ಬರು ತಾವು ಬೆಳೆದ ಮಾವನ್ನು ತಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು (ಕೆಎಸ್‌ಎಂಡಿಎಂಸಿ) ಇದೇ ತಿಂಗಳಲ್ಲಿ ಮಾವು ಮೇಳ ನಡೆಸಲು ಸಿದ್ಧತೆ ನಡೆಸಿದೆ.

ಫಸಲು ಬಂದಿರುವುದರಿಂದ ಕೋಲಾರ ಜಿಲ್ಲೆಯ ಮಾವು ಬೆಳೆಗಾರ ಭಾಸ್ಕರ್ ರೆಡ್ಡಿ ಈಗಿನಿಂದಲೇ ವ್ಯಾಪಾರ ಆರಂಭಿಸಿದ್ದಾರೆ.ರಸಭರಿತ 12ಕ್ಕೂ ಹೆಚ್ಚು ತಳಿಯ ಮಾವು ಲಾಲ್‌ಬಾಗ್‌ ಉದ್ಯಾನಕ್ಕೆ ಬರುವವರನ್ನು ಆಕರ್ಷಿಸುತ್ತಿವೆ.

‘ಸಾಮಾನ್ಯವಾಗಿ ಈ ಅವಧಿ ವೇಳೆಗೆ ಮಾರುಕಟ್ಟೆಗಳಲ್ಲಿ ಮಾವು ತುಂಬಿ ತುಳುಕಾಡುತ್ತಿತ್ತು. ಆದರೆ, ಅಕಾಲಿಕ ಮಳೆಯಿಂದ ಮಾವು ಬೆಳೆ ತಡವಾಗಿ ಸಾಮಾನ್ಯ ಅವಧಿಗಿಂತ ವಿಳಂಬವಾಗಿ ಮಾವು
ಪ್ರಿಯರ ಕೈಸೇರುತ್ತಿದೆ. ಇಳುವರಿಯೂ ಶೇ 40ರಷ್ಟು ಕುಸಿದಿದೆ’ಎಂದುಭಾಸ್ಕರ್ ರೆಡ್ಡಿ ಅವರು ಹೇಳಿದರು.

‘ಮಾವು ನಿಗಮ ಮತ್ತು ತೋಟಗಾರಿಕೆ ಇಲಾಖೆ ಸಹಕಾರ
ದೊಂದಿಗೆ ಒಂದು ವಾರದಿಂದ ವ್ಯಾಪಾರ ಆರಂಭಿಸಿದ್ದೇನೆ. ಗ್ರಾಹಕರು ಮಾವು ಖರೀದಿಗೆ ಮುಗಿಬೀಳು
ತ್ತಿದ್ದಾರೆ. ಸದ್ಯಕ್ಕೆ ವ್ಯಾಪಾರ ಚೆನ್ನಾಗಿದ್ದು, ಈವರೆಗೆ 1.5 ಟನ್‌ ಮಾವು ಮಾರಾಟವಾಗಿದೆ’ ಎಂದು ಭಾಸ್ಕರ್‌ ಹೇಳಿದರು.

ಸಂಪರ್ಕ: 9972649184

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT