ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ದುರ್ಬಲಗೊಳಿಸುತ್ತಿರುವ ನಾಯಕರು: ಖರ್ಗೆ ಕಿಡಿ

‘ಸಿದ್ಧಾಂತ ನಾಶವಾದರೆ, ನಮ್ಮ ನಾಶವೂ ಖಚಿತ’
Last Updated 20 ನವೆಂಬರ್ 2020, 3:06 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ನಾಯಕತ್ವದ ಕುರಿತು ರಾಷ್ಟ್ರಮಟ್ಟದಲ್ಲಿ ಅಪಸ್ವರ ಎದ್ದಿರುವ ಬೆನ್ನಲ್ಲೇ, ನಾಯಕತ್ವವನ್ನು
ಟೀಕಿಸುತ್ತಿರುವ ಮುಖಂಡರ ವಿರುದ್ಧ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದು, ‘ಈ ನಾಯಕರು ಪಕ್ಷವನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.

‘ಪಕ್ಷದ ಕೆಲವು ನಾಯಕರು ಪಕ್ಷ ಮತ್ತು ನಮ್ಮ ನಾಯಕರ ವಿರುದ್ಧವೇ ಮಾತನಾಡಿರುವುದು ನೋವುಂಟು ಮಾಡಿದೆ’ ಕೆ‍ಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿಯವರ ಜನ್ಮದಿನದ ಕಾರ್ಯಕ್ರಮದಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ಒಂದು ಕಡೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಮ್ಮ ಬೆನ್ನ ಹಿಂದಿವೆ. ಇನ್ನೊಂದು ಕಡೆ ಆಂತರಿಕ ಭಿನ್ನಾಭಿಪ್ರಾಯ ಮತ್ತು ಕಿತ್ತಾಟ ನಡೆದಿದೆ. ಪಕ್ಷವನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತಾ ಹೋದರೆ ನಾವು ಮುನ್ನಡೆಯಲು ಸಾಧ್ಯವಿಲ್ಲ. ಪಕ್ಷದ ಸಿದ್ಧಾಂತ ನಾಶವಾದರೆ, ನಾವೆಲ್ಲ ನಾಶವಾಗುತ್ತೇವೆ’ ಎಂದು ಎಚ್ಚರಿಸಿದರು.

ಬಿಹಾರ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಕಾರಣ ನಾಯಕತ್ವದ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ಖರ್ಗೆ ಅವರು ‘ಗಾಂಧಿ ಪರಿವಾರ’ವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

‘ಗಾಂಧಿ ಪರಿವಾರ ಮತ್ತು ನಾಯಕತ್ವವನ್ನು ಟೀಕಿಸುತ್ತಿರುವವರು ತಾವಿರುವ ಪ್ರದೇಶದಲ್ಲಿ ಒಬ್ಬ ಕಾರ್ಪೋರೇಟರ್ ಅನ್ನು ಗೆಲ್ಲಿಸುವ ಶಕ್ತಿ ಹೊಂದಿಲ್ಲ. ಪಕ್ಷ ಸುಸ್ಥಿತಿಯಲ್ಲಿ ಇದ್ದಾಗ ಎಲ್ಲರೂ ಹೊಗಳುತ್ತಾರೆ. ಸೋತಾಗ ಅದಕ್ಕೆ ರಾಹುಲ್‌ ಗಾಂಧಿ, ಸೋನಿಯಾಗಾಂಧಿ ಕಾರಣರೆಂದು ಗೂಬೆ ಕೂರಿಸುತ್ತಾರೆ’ ಎಂದರು.

‘ದೇಶದಲ್ಲಿ ಕಮ್ಯುನಿಸ್ಟರು ಎಲ್ಲ ಕಡೆ ಸಕ್ರಿಯರಾಗುತ್ತಿದ್ದಾರೆ. ಆದರೆ ನಾವು ಜನರ ಮನವೊಲಿಸುವಲ್ಲಿ ವಿಫಲರಾಗಿ
ದ್ದೇವೆ. ಜನ ಮಾತ್ರವಲ್ಲ; ಪಕ್ಷದ ಕಾರ್ಯಕರ್ತರನ್ನು ಮನವೊಲಿಸುವಲ್ಲೂ ವಿಫಲರಾಗಿದ್ದೇವೆ. ಖರ್ಗೆ ಅವರ ನೋವು ಅರ್ಥವಾಗುತ್ತದೆ. ಅವರ ಅಭಿಪ್ರಾಯಗಳಿಗೆ ಸಹಮತವಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT