ಬೆಂಗಳೂರು: ಲಾಕ್ಡೌನ್ನಿಂದ ಸಮಸ್ಯೆ ಎದುರಿಸುತ್ತಿರುವ ನಿರ್ಗತಿಕರು ಹಾಗೂ ಕಾರ್ಮಿಕರಿಗೆ ಚಕ್ರವರ್ತಿ ಬಡಾವಣೆಯಲ್ಲಿರುವ ದತ್ತಗುರು ಸದಾನಂದ ಮಹಾರಾಜರ ಆಶ್ರಮದ ವತಿಯಿಂದ ನಿತ್ಯ ಸಾವಿರ ಊಟವನ್ನು ವಿತರಿಸಲಾಗುತ್ತಿದೆ.

ಸಾಮಾನ್ಯ ದಿನಗಳಲ್ಲಿ ಈ ಆಶ್ರಮದಲ್ಲಿ ಮೂರು ಹೊತ್ತು ದಾಸೋಹ ನಡೆಯುತ್ತಿತ್ತು. ಬೆಳಿಗ್ಗೆ 500 ಮಂದಿಗೆ ಉಪಾಹಾರ, ಮಧ್ಯಾಹ್ನ 1,500 ಹಾಗೂ ರಾತ್ರಿ 1 ಸಾವಿರ ಭಕ್ತಾಧಿಗಳಿಗೆ ಊಟವನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿತ್ತು. ಲಾಕ್ ಡೌನ್ ಹಿನ್ನೆಲೆಯಲ್ಲಿ ಈಗ ತಾತ್ಕಾಲಿಕವಾಗಿ ಆಶ್ರಮದಲ್ಲಿ ಭಕ್ತಾಧಿಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಅಲ್ಲಿ ತಯಾರಿಸಿದ ಊಟವನ್ನು ನಗರದ ವಿವಿಧೆಡೆ ಅಗತ್ಯ ಇರುವವರಿಗೆ ಮಧ್ಯಾಹ್ನ ವಿತರಿಸಲಾಗುತ್ತಿದೆ.

‘ಲಾಕ್ಡೌನ್ ಬಳಿಕವೂ ಆಶ್ರಮದಲ್ಲಿ ಮೂರು ಹೊತ್ತು ಪೂಜೆ ಮಾಡಲಾಗುತ್ತಿದೆ. ಮಾಡಿರುವ ಪ್ರಸಾದವನ್ನು ಹಸಿದವರಿಗೆ ನೀಡಲಾಗುತ್ತಿದೆ. ಕೊಳೆಗೇರಿ ಪ್ರದೇಶಗಳಿಗೆ ತೆರಳಿ, ಆಹಾರದ ಪ್ಯಾಕ್ಗಳನ್ನು ನೀಡುತ್ತಿದ್ದೇವೆ. ಪಾಯಸ ಹಾಗೂ ಅರ್ಧ ಲೀಟರ್ ಮಿನರಲ್ ನೀರಿನ ಬಾಟಲಿಯನ್ನು ನೀಡಲಾಗುತ್ತಿದೆ’ ಎಂದು ಆಶ್ರಮದ ರಿಸೀವರ್ ವಿ. ಶಂಕರ್ ತಿಳಿಸಿದರು.

‘ಎರಡು ಕಾರಿನಲ್ಲಿ ಆಹಾರದ ಪೊಟ್ಟಣವನ್ನು ಕೊಂಡೊಯ್ಯತ್ತಿದ್ದೇವೆ. ಆಹಾರ ಅಗತ್ಯ ಇರುವವರಿಗೆ ಸಿಗಬೇಕು ಎಂಬ ಉದ್ದೇಶದಿಂದ ನಾವೇ ಗುರುತಿಸಿ, ನೀಡುತ್ತಿದ್ದೇವೆ. ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.