ಬುಧವಾರ, ನವೆಂಬರ್ 30, 2022
17 °C

ವಾಹನ ಸವಾರರಿಂದ ಹಣ ವಸೂಲಿ ದೂರು: ಆರ್‌ಟಿಒ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್ (ಬೀದರ್‌ ಜಿಲ್ಲೆ) : ವಾಹನ ಸವಾರರಿಂದ ಹಣ ವಸೂಲಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಾಲ್ಲೂಕಿನ  ಮೋಳಕೆರಾ ಗ್ರಾಮ ಸಮೀಪ ಕಲಬುರಗಿ ಲೋಕಾಯುಕ್ತ ಅಧೀಕ್ಷಕ ಪಿ. ಕರ್ನೂಲ್  ನೇತೃತ್ವದ ತಂಡ ಬೆಳಗಿನ ಜಾವ ದಾಳಿ ನಡೆಸಿದೆ.

ದಾಳಿ ವೇಳೆಯಲ್ಲಿ ಒಂದೂವರೆ ಲಕ್ಷ ರೂಪಾಯಿ ಪತ್ತೆಯಾಗಿದೆ. ವಾಹನಗಳಿಂದ ಸಂಗ್ರಹಿಸುವ ಹಣ ಹಾಗೂ ಕಚೇರಿಯಲ್ಲಿ ದೊರಕಿರುವ ಹಣ ತಾಳೆ ಮಾಡಿ ನೋಡಿದಾಗ ಹೆಚ್ಚುವರಿ ಹಣ ಸಂಗ್ರಹ ಮಾಡಿರುವುದು ಪತ್ತೆಯಾಗಿದೆ ಎನ್ನಲಾಗಿದೆ.

ಕಲಬುರಗಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡಪಾಟೀಲ,  ಬೀದರ್ ಡಿವೈಎಸ್ಪಿ ಎನ್.ಎಂ ಓಲೇಕರ್ ಹಾಗೂ 30 ಸಿಬ್ಬಂದಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು