ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮಗಳ ಉತ್ತೇಜನಕ್ಕೆ ‘ಲೂಮೋಸ್ ಹೆಲ್ತ್’ಗೆ ಚಾಲನೆ

Last Updated 19 ಜುಲೈ 2019, 18:59 IST
ಅಕ್ಷರ ಗಾತ್ರ

ಬೆಂಗಳೂರು:ಆಂಥಿಲ್‌ ವೆಂಚರ್ಸ್ ಹಾಗೂ ಹೆಲ್ತ್‌ಕೇರ್‌ ಗ್ಲೋಬಲ್ ಕ್ಯಾನ್ಸರ್‌ ಆಸ್ಪತ್ರೆ (ಎಚ್‌ಸಿಜಿ) ಸಹಯೋಗದಲ್ಲಿ ನವೋದ್ಯಮಗಳ ಹೂಡಿಕೆ ಮತ್ತು ಕ್ಷಿಪ್ರ ಬೆಳವಣಿಗೆಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ‘ಲೂಮೋಸ್ ಹೆಲ್ತ್’ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.

‘ಆರು ತಿಂಗಳ ಈ ಕಾರ್ಯಕ್ರಮಕ್ಕೆಆರೋಗ್ಯ ಸೇವೆ ಮತ್ತು ಜೀವವಿಜ್ಞಾನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿರುವಅಲಿಕ್ಸಿರ್, ಆಯುರಿದಮ್, ಬೈಮೆಡಿಸ್, ಸಿಟೆಸ್ಟ್ ಮೆಡಿಕಲ್ಸ್, ಕ್ರೋನಿಕೇರ್ ಮತ್ತು ರೇಬೇಬಿ ಎಂಬ ಆರು ನವೋದ್ಯಮಗಳನ್ನುಆಯ್ಕೆ ಮಾಡಲಾಗಿದೆ.ಜಾಗತಿಕ ಮಾರುಕಟ್ಟೆಯ ವೇಗಕ್ಕೆ ಸಮಾನವಾಗಿ ಅಭಿವೃದ್ಧಿ ಹೊಂದಲು ನೆರವಾಗುತ್ತೇವೆ’ ಎಂದು ಆಂಥಿಲ್‌ ವೆಂಚರ್ಸ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್ ವಂಗಾ ತಿಳಿಸಿದರು.

ಎಚ್‍ಸಿಜಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಅಜಯ್‍ಕುಮಾರ್,‘ಈ ಕಾರ್ಯಕ್ರಮದ ಮೂಲಕ ‘ಮೇಕ್ ಇನ್ ಇಂಡಿಯಾ’ಗೆ ನಾವು ಕೈಜೋಡಿಸುತ್ತಿದ್ದೇವೆ. ನವೋದ್ಯಮಗಳಿಗೆ ಪೋಷಣೆ ನೀಡಿಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆಗಳು ತರಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT