ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರ ದಸರಾ ಉತ್ಸವಕ್ಕೆ ನಾಳೆ ಚಾಲನೆ

Last Updated 5 ಅಕ್ಟೋಬರ್ 2021, 17:01 IST
ಅಕ್ಷರ ಗಾತ್ರ

ಬೆಂಗಳೂರು: ದಸರಾ ಅಂಗವಾಗಿಮಲ್ಲೇಶ್ವರದ ಆರ್ಯವೈಶ್ಯ ಸಂಘವು ಮಲ್ಲೇಶ್ವರದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಅ.7ರಿಂದ 16ರವರೆಗೆಮಲ್ಲೇಶ್ವರ ದಸರಾ ಉತ್ಸವವನ್ನು ಆಯೋಜಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದದೇವಸ್ಥಾನದ ಕಾರ್ಯದರ್ಶಿ ರವಿಶಂಕರ್,‘ದಸರಾ ಉತ್ಸವಕ್ಕೆ ಅ.7ರಂದು ಸಂಜೆ6 ಗಂಟೆಗೆ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ, ಸಂಸದರಾದ ಪಿ.ಸಿ.ಮೋಹನ್ ಹಾಗೂ ಡಿ.ವಿ.ಸದಾನಂದ ಗೌಡ ಅವರು ಚಾಲನೆ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ವರ್ಷವೂ ದೇವಾಲಯದಲ್ಲಿ ವಿಶೇಷ ರೀತಿಯ ಸೆಟ್ ಹಾಕಿ ದಸರಾ ಆಚರಿಸಲಾಗುವುದು. ಈ ಬಾರಿ‘ಸಾಗರ ಕನ್ಯೆ ಶ್ರೀವಾಸವಿ’ ಎಂಬ ಪರಿಕಲ್ಪನೆಯಡಿ 50 ಕುಶಲಕರ್ಮಿಗಳಿಂದ ಸಾಗರ ಗರ್ಭದ ವಿಸ್ಮಯಗಳ ಸೆಟ್ ಹಾಕಲಾಗಿದೆ’ ಎಂದರು.

‘ನವರಾತ್ರಿ ವಿಶೇಷವಾಗಿ 800ಕ್ಕೂ ಹೆಚ್ಚು ಗೊಂಬೆಗಳನ್ನು ಕೂರಿಸಲಾಗಿದೆ. 10 ಅಡಿ ಎತ್ತರದ ಅಂಬಾರಿ ಮಾಡಲಾಗಿದೆ.ಉತ್ಸವದ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 6ರಿಂದ ಸಂಜೆ 9 ಗಂಟೆಯವರೆಗೂ ಭಕ್ತರಿಗೆ ಪ್ರವೇಶ ಇರಲಿದೆ. ಏಕಕಾಲಕ್ಕೆ20 ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT