ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಹೆಸರಿನಲ್ಲಿ ಮಹಿಳೆಗೆ ವಂಚನೆ: ದೂರು ದಾಖಲು

Last Updated 17 ಮಾರ್ಚ್ 2020, 21:08 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿದ ಯುವಕನೊಬ್ಬ ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟಿದ್ದಾನೆ ಎಂದು ಆರೋಪಿಸಿ ಬಸವೇಶ್ವರ ನಗರದ ಮಹಿಳೆಯೊಬ್ಬರು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ವಿವಾಹಿತರಾಗಿದ್ದ ಮಹಿಳೆ ಆರು ವರ್ಷದ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಮರು ಮದುವೆಗೆ ಹುಡುಗನನ್ನು ಹುಡುಕುತ್ತಿದ್ದ ಈಕೆ ಮ್ಯಾಟ್ರಿಮೊನಿಯಲ್‌ ಜಾಲತಾಣದಲ್ಲಿ ಜಾಹೀರಾತು ನೀಡಿದ್ದರು. ಹುಡುಗ ಸಿಗದಿದ್ದರಿಂದ ಜಾಹೀರಾತು ತೆಗೆಸಿದ್ದರು. ಈ ಮಧ್ಯೆ, ಮೊಬೈಲ್‌ನಲ್ಲಿ ಪರಿಚಿತನಾದ ಹರ್ಷ ಎಂಬಾತ ತಮ್ಮನ್ನು ಹೊಟೇಲ್‌, ಹುಕ್ಕಾ ಬಾರ್‌ ಹಾಗೂ ಪಬ್‌ಗೆ ಕರೆದೊಯ್ಯುತ್ತಿದ್ದ. ದೈಹಿಕ ಸಂಪರ್ಕವನ್ನೂ ಹೊಂದಿದ್ದ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪಿತನ್ನ ಚಿಕ್ಕಪ್ಪನ ಮಗ ಚೇತನ್‌ನನ್ನು ಕರೆದುಕೊಂಡು ಬರುತ್ತಿದ್ದ. ಮನೆಯಲ್ಲೇ ಇಬ್ಬರೂ ಮದ್ಯ ಸೇವಿಸುತ್ತಿದ್ದರು. ಹರ್ಷನ ಚಿಕಿತ್ಸೆಗೆ ಹಣ ಬೇಕೆಂದು ಚೇತನ್‌ ₹ 1.5 ಲಕ್ಷ ಪಡೆದಿದ್ದ. ಹಣಕ್ಕಾಗಿ ಕಿರುಕುಳ ಹೆಚ್ಚಾದಾಗ ದೂರು ನೀಡಿದೆ. ಪೊಲೀಸರು ವಿಚಾರಣೆ ನಡೆಸಿ ₹ 40 ಸಾವಿರ ವಾಪಸ್‌ ಕೊಟ್ಟು ಪತ್ರಕ್ಕೆ ಸಹಿ ಪಡೆದುಕೊಂಡರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT