ಭಾನುವಾರ, ಸೆಪ್ಟೆಂಬರ್ 26, 2021
28 °C

ಬೆಂಗಳೂರು: ಪಾರಿವಾಳ ಹಿಡಿಯಲು ಹೋಗಿ ಮಹಡಿಯಿಂದ ಬಿದ್ದು ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಜಯನಗರ ಠಾಣೆ ವ್ಯಾಪ್ತಿಯಲ್ಲಿ ಪಾರಿವಾಳ ಹಿಡಿಯಲು ಹೋಗಿ ಕಟ್ಟಡದಿಂದ ಬಿದ್ದು ಉಮರ್ ಫಾರೂಕ್ (19) ಎಂಬುವರು ಮೃತಪಟ್ಟಿದ್ದಾರೆ.

'ಭೂಪಸಂದ್ರದ ನಿವಾಸಿ ಉಮರ್ ಫಾರೂಕ್ ಅವರು ಸೋಮವಾರ ಸಂಜೆ ಪಾರಿವಾಳ ಹಿಡಿಯಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ' ಎಂದು ಪೊಲೀಸರು ಹೇಳಿದರು.

'ಪಾರಿವಾಳ ಹಿಡಿಯುವುದನ್ನು ಹವ್ಯಾಸ ಮಾಡಿಕೊಂಡಿದ್ದ ಉಮರ್, ಹಲವು ಕಟ್ಟಡಗಳನ್ನು ಏರಿ ಪಾರಿವಾಳ ಹಿಡಿದು ತರುತ್ತಿದ್ದರು. ಸೋಮವಾರ ಸಂಜೆಯೂ ನಾಲ್ಕು ಅಂತಸ್ತಿನ ಕಟ್ಟಡ ಏರಿ‌ ಮಹಡಿಯಲ್ಲಿ ನಿಂತು ಪಾರಿವಾಳ ಹಿಡಿಯುತ್ತಿದ್ದರು. ಅದೇ ಸಂದರ್ಭದಲ್ಲೇ ಆಯತಪ್ಪಿ ಮಹಡಿಯಿಂದ ಬಿದ್ದಿದ್ದರು. ಅದರಿಂದಾಗಿ ತೀವ್ರ ಗಾಯಗೊಂಡು ಅವರು ಮೃತಪಟ್ಟಿದ್ದಾರೆ' ಎಂದೂ ತಿಳಿಸಿದರು.

'ಘಟನೆ ಸಂಬಂಧ ಸಂಜಯನಗರ ಠಾಣೆಯಲ್ಲಿ‌ ಎಫ್‌ಐಆರ್ ದಾಖಲಾಗಿದೆ. ತನಿಖೆ ಮುಂದುವರಿದಿದೆ' ಎಂದೂ ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು