ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್, ಸ್ಯಾನಿಟೈಸರ್‌ ಪೂರೈಕೆ ಭರವಸೆ: ₹ 48 ಲಕ್ಷ ವಂಚನೆ

ಅಸ್ಸಾಂನ ಕಂಪನಿಗಳ ವಿರುದ್ಧ ಎಫ್‌ಐಆರ್
Last Updated 5 ಜೂನ್ 2021, 16:34 IST
ಅಕ್ಷರ ಗಾತ್ರ

ಬೆಂಗಳೂರು: ಮಾಸ್ಕ್, ಸ್ಯಾನಿಟೈಸರ್ ಹಾಗೂ ಇತರೆ ವೈದ್ಯಕೀಯ‌ ಪರಿಕರ ಪೂರೈಕೆ ಮಾಡುವುದಾಗಿ ಹೇಳಿ ನಗರದ ಕಂಪನಿಯೊಂದರಿಂದ ₹ 48 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಈಶಾನ್ಯ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಂ‍ಪನಿ ಪ್ರತಿನಿಧಿಯಾಗಿರುವ ವಿದ್ಯಾರಣ್ಯಪುರದ ನಿವಾಸಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಸ್ಸಾಂನ ನಿಪ್ಪೊನ್ ದುಲುವಾ, ಹುಜೈ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಂ‍ಪನಿಗೆ ಬೇಕಾದ ಮಾಸ್ಕ್, ಸ್ಯಾನಿಟೈಸರ್ ಹಾಗೂ ಕೆಲ ವೈದ್ಯಕೀಯ ಸಾಧನ ಖರೀದಿಗಾಗಿ ಹುಡುಕಾಟ ನಡೆದಿತ್ತು. ಕಂಪನಿ ಪ್ರತಿನಿಧಿ, ಆನ್‌ಲೈನ್‌ ಮೂಲಕ ಆರೋಪಿಗಳನ್ನು ಸಂಪರ್ಕಿಸಿದ್ದರು. ಮುಂಗಡವಾಗಿ ಹಣ ನೀಡಬೇಕೆಂದು ಹೇಳಿದ್ದ ಆರೋಪಿಗಳು, ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 48 ಲಕ್ಷ ಹಾಕಿಸಿಕೊಂಡಿದ್ದರು.’

‘ಹಣ ಪಡೆದ ನಂತರ ಆರೋಪಿಗಳು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಳುಹಿಸಿರಲಿಲ್ಲ. ಈ ಬಗ್ಗೆ ಕಂಪನಿ ಪ್ರತಿನಿಧಿಗಳು ವಿಚಾರಿಸಿದಾಗ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಹಣವನ್ನೂ ಮರಳಿಸಿಲ್ಲ. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT