ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಗವಸು: ವೈಜ್ಞಾನಿಕ ವಿಲೇವಾರಿಗೆ ಸೂಚನೆ

Last Updated 17 ಸೆಪ್ಟೆಂಬರ್ 2020, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಬಳಸಿದ ಮುಖಗವಸುಗಳನ್ನು ಎಲ್ಲೆಂದರೆಲ್ಲಿ ಎಸೆಯಬಾರದು. ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಬಟ್ಟೆಯ ಮುಖಗವಸನ್ನು ಸಾಬೂನು ದ್ರಾವಣ ಅಥವಾ ಉಪ್ಪು ಮಿಶ್ರಣ ಮಾಡಿದ ಕುದಿಯುವ ನೀರಿನಿಂದ ನಿತ್ಯ ಸ್ವಚ್ಛಗೊಳಿಸಿಕೊಳ್ಳಬೇಕು’ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಮಾಸ್ಕ ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆದಲ್ಲಿ ಅದರಿಂದ ಅಪಾಯ ಇರುತ್ತದೆ. ಹಾಗಾಗಿ ಮುಚ್ಚಳವಿರುವ ಕಸದ ತೊಟ್ಟಿಯಲ್ಲಿ ಹಾಕಬೇಕು. ಮರುಬಳಕೆ ಮಾಡಬಹುದಾದ ಮಾಸ್ಕ್‌ಗಳನ್ನು ನಾಲ್ಕು ವಿಧಾನಗಳಲ್ಲಿ ಸ್ವಚ್ಛಗೊಳಿಸಬಹುದು. ಸಾಬೂನು ಮತ್ತು ಬೆಚ್ಚನೆಯ ನೀರನ್ನು ಬಳಸಿ ಮುಖಗವಸನ್ನು ಸಂಪೂರ್ಣವಾಗಿ ತೊಳೆಯಬೇಕು. ಬಿಸಿಲಿನಲ್ಲಿ ಕನಿಷ್ಠ ಐದು ಗಂಟೆಗಳವರೆಗೆ ಒಣಗಿಸಬೇಕು. ಇಲ್ಲವಾದಲ್ಲಿ ಪ್ರೆಶರ್‌ ಕುಕ್ಕರಿನ ಒಳಗೆ ಉಪ್ಪುನೀರು ಹಾಕಿ, ಅದರಲ್ಲಿ ಮುಖಗವಸನ್ನು ಇರಿಸಬೇಕು. ಹತ್ತು ನಿಮಿಷ ಕುದಿಸಿ, ಬಳಿಕ ಒಣಗಿಸಬೇಕು ಎಂದು ಇಲಾಖೆ ತಿಳಿಸಿದೆ.

ಪ್ರೆಶರ್ ಕುಕ್ಕರ್ ಇಲ್ಲದಿದ್ದಲ್ಲಿ ಬಟ್ಟೆಯಮುಖಗವಸನ್ನು ಬಿಸಿ ನೀರಿನಲ್ಲಿ 15 ನಿಮಿಷಗಳ ವರೆಗೆ ಕುದಿಸಬೇಕು. ಸಾಬೂನು ನೀರಿನಿಂದಲೂ ಸ್ವಚ್ಛಗೊಳಿಸಬಹುದು. ಮುಖಗವಸು ಒಣಗಿದ ಮೇಲೆ ಇಸ್ತ್ರಿ ಪೆಟ್ಟಿಗೆಯಿಂದ ಐದು ನಿಮಿಷಗಳ ಕಾಲ ಬಿಸಿ ಮಾಡಬೇಕು. ಮಾಸ್ಕ್‌ ಅನ್ನು ಬಿಚ್ಚಿದ ತಕ್ಷಣವೂ ಕೈಗಳನ್ನು ಸ್ವಚ್ಛಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT