ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್‌, ಆಯುಕ್ತರ ಬಂಗಲೆ ನಿರ್ಮಾಣ ಯೋಜನೆ ರದ್ದು

Last Updated 2 ಅಕ್ಟೋಬರ್ 2018, 19:13 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಮೇಯರ್‌ ಹಾಗೂ ಆಯುಕ್ತರಿಗಾಗಿ ಎರಡು ಬಂಗಲೆ ನಿರ್ಮಿಸುವ ಯೋಜನೆಯನ್ನು ನೂತನ ಮೇಯರ್‌ ಗಂಗಾಂಬಿಕೆ ರದ್ದುಪಡಿಸಿದ್ದಾರೆ.

ಉಭಯರಿಗೆ ಪ್ರತ್ಯೇಕ ಬಂಗಲೆ ನಿರ್ಮಿಸಲು ಒಟ್ಟು ₹ 5 ಕೋಟಿಯನ್ನು ಬಿಬಿಎಂಪಿ 2018–19ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿರಿಸಿತ್ತು. ಮೇಯರ್‌ಗೆ ಗಾಂಧಿ ನಗರದಲ್ಲಿ ಹಾಗೂ ಆಯುಕ್ತರಿಗೆ ಶಾಂತಿ ನಗರದಲ್ಲಿ ಬಂಗಲೆ ನಿರ್ಮಿಸಲು ನಿವೇಶನ ಗುರುತಿಸಲಾಗಿತ್ತು.

‘ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು, ಪಾಲಿಕೆಗೆ ಆರ್ಥಿಕ ಹೊರೆ ತಪ್ಪಿಸುವ ಸಲುವಾಗಿ ಈ ಯೋಜನೆಯನ್ನು ಕೈಬಿಟ್ಟಿದ್ದೇನೆ.
ನನ್ನ ಅವಧಿಯಲ್ಲಿ ಬಂಗಲೆ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಮೇಯರ್‌ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮೇಯರ್‌ ಸಂಪತ್‌ರಾಜ್‌, ‘ಈ ವಿಚಾರ ನೂತನ ಮೇಯರ್‌ ಅವರ ವಿವೇಚನೆಗೆ ಬಿಟ್ಟದ್ದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT