ಗುರುವಾರ , ಮಾರ್ಚ್ 30, 2023
24 °C

ನಿಮ್ಹಾನ್ಸ್‌ಗೆ ವೈದ್ಯಕೀಯ ಉಪಕರಣ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್‌ ಪರಿಹಾರ ಟ್ರಸ್ಟ್’ ಹಾಗೂ ಸಿನೊಪ್ಸಿಸ್ ಇಂಡಿಯಾ ಪ್ರೈ.ಲಿ. ನೀಡಿದ ಆರ್ಥಿಕ ಪರಿಹಾರವನ್ನು ಬಳಸಿಕೊಂಡು, ರೋಟರಿ ಕ್ಲಬ್ ನೈರುತ್ಯ ವಿಭಾಗ ಹಾಗೂ ಪ್ರಾಜೆಕ್ಟ್ ಸ್ಟೆಪ್ ಒನ್ ₹ 8.5 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ನಿಮ್ಹಾನ್ಸ್‌ಗೆ ಹಸ್ತಾಂತರಿಸಿವೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಹಾಗೂ ತೀವ್ರ ನಿಗಾ ಘಟಕಕ್ಕೆ ಮೂಲಸೌಕರ್ಯ ಒದಗಿಸುವ ಕಾರ್ಯವನ್ನು ರೋಟರಿ ಕ್ಲಬ್ ನೈರುತ್ಯ ವಿಭಾಗ ಹಾಗೂ ಪ್ರಾಜೆಕ್ಟ್ ಸ್ಟೆಪ್ ಒನ್ ಮುಂದುವರೆಸಿವೆ. ಮೂಲಸೌಕರ್ಯ ವೃದ್ಧಿಗೆ ಈವರೆಗೆ ₹ 50 ಲಕ್ಷ ಮೌಲ್ಯದ ವಿವಿಧ ವೈದ್ಯಕೀಯ ಉಪಕರಣಗಳನ್ನು ದಾನ ನೀಡಿವೆ.

‌ರೋಟರಿ ಕ್ಲಬ್ ನೈರುತ್ಯ ವಿಭಾಗದ ಅಧ್ಯಕ್ಷ ಅಮರಚಂದ್ ರಾಂಧರ್ ಅವರು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರಿಗೆ 5 ಬೈಪಾಸ್‌ ಯಂತ್ರಗಳು, 2 ಎಚ್‌ಎನ್‌ಎಫ್‌ಸಿ ಯಂತ್ರಗಳನ್ನು ಹಸ್ತಾಂತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು