ಕಂಟೋನ್ಮೆಂಟ್–ಪಾಟರಿ ಟೌನ್ ಸುರಂಗ ನಿರ್ಮಾಣ ಪೂರ್ಣ

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ಮತ್ತೊಂದು ಸುರಂಗ ಮಾರ್ಗವನ್ನು ಬಿಎಂಆರ್‌ಸಿಎಲ್(ಬೆಂಗಳೂರುಮೆಟ್ರೊ ರೈಲು ನಿಗಮ) ಪೂರ್ಣಗೊಳಿಸಿದೆ.
ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಡುವೆ 900 ಮೀಟರ್ ಸುರಂಗ ಕೊರೆದು ‘ಊರ್ಜಾ’ ಟಿಬಿಎಂ(ಟನಲ್ ಬೋರಿಂಗ್ ಮಷಿನ್) ಗುರುವಾರ ಹೊರಬಂದಿತು.
ಸುಮಾರು ಆರು ತಿಂಗಳಲ್ಲಿ ಈ ಕಾಮಗಾರಿಯನ್ನು ‘ಊರ್ಜಾ’ ಯಶಸ್ವಿಯಾಗಿ ಪೂರ್ಣಗೊಳಿಸಿದೆ. 2021ರ ಡಿಸೆಂಬರ್ 22ರಂದು ಕಂಟೋನ್ಮೆಂಟ್ ನಿಲ್ದಾಣದಿಂದ ಸುರಂಗ ಕೊರೆಯುವ ಕೆಲಸವನ್ನು ‘ಊರ್ಜಾ’ ಆರಂಭಿಸಿತ್ತು. ದಿನಕ್ಕೆ ಸುಮಾರು 5 ಮೀಟರ್ ಸುರಂಗವನ್ನು ಅದು ಕೊರೆದಿದೆ.
ಇದಕ್ಕೂ ಮೊದಲು 2020ರ ಜುಲೈನಲ್ಲಿ ಕಂಟೋನ್ಮೆಂಟ್ ಬಳಿ ನೆಲದಡಿ ಸೇರಿದ್ದ 'ಊರ್ಜಾ’
ಯಂತ್ರ ಶಿವಾಜಿನಗರ ನಿಲ್ದಾಣದ ತನಕ 855 ಮೀಟರ್ ಸುರಂಗವನ್ನು ಕೊರೆದಿತ್ತು. 2021ರ ಸೆಪ್ಟೆಂಬರ್ 22ರಂದು ಹೊರಕ್ಕೆ ಬಂದಿತ್ತು. ಬಳಿಕ ಈ ಯಂತ್ರ ಡಿಸೆಂಬರ್ 22ರಂದು ಕಂಟೋನ್ಮೆಂಟ್ ನಿಲ್ದಾಣದ ಬಳಿ ನೆಲದಡಿ ಸೇರಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.