ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಕಾಮಗಾರಿ: ಶಿಕ್ಷಣ–ಉದ್ಯೋಗ ಕಲ್ಪಿಸದಿದ್ದರೆ ಹೋಗಲ್ಲ

ಲಕ್ಕಸಂದ್ರ ಕೊಳೆಗೇರಿ 103 ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ
Last Updated 20 ಫೆಬ್ರುವರಿ 2020, 22:21 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಡೈರಿ ವೃತ್ತದಿಂದ ನಾಗವಾರ ಮಾರ್ಗ ನಿರ್ಮಾಣ ಕಾಮಗಾರಿಗಾಗಿ ಲಕ್ಕಸಂದ್ರದ ಕೊಳೆಗೇರಿ ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ ನಡೆಯುತ್ತಿದೆ.

ಆದರೆ, ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ, ಕಾರ್ಮಿಕರಿಗೆ ಉದ್ಯೋಗ ಕಲ್ಪಿಸದಿದ್ದರೆ ಸ್ಥಳದಿಂದ ಕದಲುವುದಿಲ್ಲ ಎಂದು ಈ ಕಟ್ಟಡ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.

ಮೆಟ್ರೊಗೆ ಕಾಂಕ್ರೀಟ್‌ ಕಂಬಗಳ ತಯಾರಿಕೆ ಮತ್ತು ಇತರೆ ಕಾರ್ಯಗಳಿಗೆ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) 6 ಎಕರೆ ಜಾಗ ಬೇಕಿತ್ತು. ಈ ಕೊಳೆಗೇರಿ ಮೆಟ್ರೊ ಮಾರ್ಗದ ಹತ್ತಿರವಿದ್ದು, 103 ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ ನಡೆದಿದೆ.

‘ವಾರದ ಹಿಂದೆ ಮೆಟ್ರೊ ಅಧಿಕಾರಿಗಳು ಬಂದಿದ್ದರು. ವಾರದಲ್ಲಿ ಜಾಗ ಖಾಲಿ ಮಾಡಲು ಹೇಳಿದ್ದಾರೆ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ’ ಎಂದು ಕೊಳೆಗೇರಿ ನಿವಾಸಿ ಗರ್ಜೆಪ್ಪ ಚೂಡಿ ಅಳಲು ತೋಡಿಕೊಂಡರು.

ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ಕಲಬುರ್ಗಿಯಿಂದ 15 ವರ್ಷಗಳ ಹಿಂದೆ ಬಂದ ಕುಟುಂಬಗಳು ಇಲ್ಲಿವೆ.

‘ಮಾಗಡಿ ರಸ್ತೆಯ ಕುರುಬರಹಳ್ಳಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸಂಘಟನೆಯ ಮುಖ್ಯಸ್ಥರು ಸ್ಥಳಾಂತರಕ್ಕೆ ಒಪ್ಪಿದ್ದಾರೆ’ ಎಂದು ಅವರು ಹೇಳಿದರು.

‘₹20 ಕೋಟಿ ನೀಡಲಾಗಿದೆ’
‘ಲಕ್ಕಸಂದ್ರದಲ್ಲಿರುವ ಈ ಕೊಳೆಗೇರಿ ಪ್ರದೇಶವು ಸರ್ಕಾರದ ಜಾಗ. ಮೆಟ್ರೊ ಕಾಮಗಾರಿಗಾಗಿ ಕಾಂಕ್ರೀಟ್‌ ಕಂಬ ಮತ್ತಿತರ ಸಾಧನ, ಉಪಕರಣಗಳ ತಯಾರಿಕೆಗೆ (ಕಾಸ್ಟಿಂಗ್‌ ಯಾರ್ಡ್‌) ಈ ಜಾಗ ಸೂಕ್ತವಾಗಿದೆ. ಇಲ್ಲಿರುವ ಕಾರ್ಮಿಕರ ಕುಟುಂಬದವರಿಗೆ ಕುರುಬರಹಳ್ಳಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಬಿಎಂಆರ್‌ಸಿಎಲ್‌ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಚನ್ನಪ್ಪಗೌಡರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊಳಚೆಪ್ರದೇಶ ಅಭಿವೃದ್ಧಿ ಮಂಡಳಿಗೆ ನಿಗಮದಿಂದ ಈಗಾಗಲೇ ₹20 ಕೋಟಿ ಪಾವತಿಸಲಾಗಿದೆ. ಕುರುಬರಹಳ್ಳಿಯಲ್ಲಿ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಕಾರ್ಯ ಆರಂಭವಾಗಿದ್ದು, ವಿದ್ಯುತ್, ಕುಡಿಯುವ ನೀರು ಹಾಗೂ ಶೌಚಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಲಿದೆ’ ಎಂದು ಅವರು ತಿಳಿಸಿದರು.

‘ಮಾನವೀಯತೆಯ ಆಧಾರದ ಮೇಲೆ ಅವರ ಪುನರ್‌ವಸತಿಗೆ ನಿಗಮವು ಎಲ್ಲ ವ್ಯವಸ್ಥೆ ಮಾಡುತ್ತಿದೆ’ ಎಂದೂ ಅವರು ಹೇಳಿದರು.

*
15 ವರ್ಷಗಳಿಂದ ಈ ವಾಸವಿದ್ದೇವೆ. ಕಟ್ಟಡ ನಿರ್ಮಾಣ ಕೆಲಸ ನಮಗೆ ಸಿಗುತ್ತಿತ್ತು. ಈಗ 15–20 ಕಿ.ಮೀ. ದೂರ ಕಳಿಸುತ್ತಿದ್ದಾರೆ. ಈಗಿನಂತೆ ಕೆಲಸ ಸಿಗುವುದಿಲ್ಲ ಎಂಬ ಭೀತಿ ಕಾಡುತ್ತಿದೆ.
-ಸಿದ್ದಪ್ಪ ಬಳ್ಳಾರಿ, ನಿವಾಸಿ

*
ಮಕ್ಕಳಿಗೆ ಪರೀಕ್ಷೆ ಇದೆ. ಇದ್ದಕ್ಕಿದ್ದಂತೆ ಹೋಗಿ ಎಂದರೆ ಏನು ಮಾಡುವುದು. ಶಾಲೆ ವ್ಯವಸ್ಥೆ ಮಾಡದಿದ್ದರೆ, ತುಂಬಾ ದೂರ ಆದರೆ ನಾವು ಈ ಸ್ಥಳ ಬಿಟ್ಟು ಹೋಗುವುದಿಲ್ಲ
-ನೀಲಮ್ಮ ಕೊಪ್ಪಳ,

ಅಂಕಿ ಅಂಶ

21.25 ಕಿ.ಮೀ.:ಗೊಟ್ಟಿಗೆರೆ–ನಾಗವಾರ ಮಾರ್ಗದ ಒಟ್ಟು ಉದ್ದ

13.79 ಕಿ.ಮೀ. : ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ ಸುರಂಗ ಮಾರ್ಗದ ಉದ್ದ

₹11,500: ಕೋಟಿ ಗೊಟ್ಟಿಗೆರೆಯಿಂದ ನಾಗವಾರ ಮಾರ್ಗ ನಿರ್ಮಾಣ ವೆಚ್ಚ (ಎಲಿವೇಟೆಡ್‌ ಸಹಿತ)

112:ನೆಲದಡಿ ನಿಲ್ದಾಣಗಳು

6 :ಎತ್ತರಿಸಿದ ನಿಲ್ದಾಣಗಳು

300:ನೆಲದಡಿ ನಿಲ್ದಾಣಗಳ ನಿರ್ಮಾಣಕ್ಕಾಗಿ ಬಿಎಂಆರ್‌ಸಿಎಲ್‌ ಸ್ವಾಧೀನಪಡಿಸಿಕೊಂಡಿರುವ ಆಸ್ತಿ ಅಥವಾ ಕಟ್ಟಡಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT