ಪಾರ್ಕಿಂಗ್‌ ಶುಲ್ಕ ಇಳಿಸಲು ಮೊರೆ

7
ಮೆಟ್ರೊ: ವಾಹನ ನಿಲುಗಡೆಗೆ ಸೌಲಭ್ಯ ಕಲ್ಪಿಸಲು ಪ್ರಯಾಣಿಕರ ಒತ್ತಾಯ

ಪಾರ್ಕಿಂಗ್‌ ಶುಲ್ಕ ಇಳಿಸಲು ಮೊರೆ

Published:
Updated:
Deccan Herald

ಬೆಂಗಳೂರು: ಮೆಟ್ರೊ ರೈಲು ನಿಲ್ದಾಣದ ಸಮೀಪದ ಪಾರ್ಕಿಂಗ್‌ ಪ್ರದೇಶಗಳ ಸ್ಥಿತಿಗತಿ ಬಗ್ಗೆ ಅಲ್ಲಿ ವಾಹನ ನಿಲ್ಲಿಸುವ ಮಾಲೀಕರಲ್ಲಿ ಅಸಮಾಧಾನ ಎದ್ದಿದೆ.

ನಗರದ ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ನಿಲ್ದಾಣಗಳ ಪಾರ್ಕಿಂಗ್‌ ವ್ಯವಸ್ಥೆ ಸ್ವಲ್ಪಮಟ್ಟಿಗೆ ಉತ್ತಮವೆನಿಸಿದೆ. ಆದರೆ, ಇತರ ನಿಲ್ದಾಣಗಳಲ್ಲಿ ಮೆಟ್ರೊ ಪಿಲ್ಲರ್‌ಗಳ ಕೆಳಗೆ, ಖಾಲಿ ಜಾಗಗಳಲ್ಲಿ ಗಾಡಿ ನಿಲ್ಲಿಸಿ ಹೋಗಬೇಕಾಗಿದೆ. ಇದಕ್ಕೆ ದುಬಾರಿ ಶುಲ್ಕ ಕೊಡಬೇಕು ಎಂಬುದು ವಾಹನ ಮಾಲೀಕರ ಅಳಲು.

ಯಶವಂತಪುರದಲ್ಲಿ ರೈಲು ನಿಲ್ದಾಣದ ಮುಂದೆಯೇ ದ್ವಿಚಕ್ರ ವಾಹನ ನಿಲ್ಲಿಸಿ ಬರುವವರು ಜಾಸ್ತಿ. ಮೆಟ್ರೊ ಬಳಿ ಸಮರ್ಪಕ ವ್ಯವಸ್ಥೆ ಇಲ್ಲ. ನ್ಯಾಷನಲ್‌ ಕಾಲೇಜು ಬಳಿಯೂ ಇದೇ ಸಮಸ್ಯೆಯಿದೆ. ಮೆಜೆಸ್ಟಿಕ್‌ ನಿಲ್ದಾಣದ ಮುಂಭಾಗ ಜಾಗ ಇದೆಯಾದರೂ ಅದು ಇನ್ನೂ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿಲ್ಲ.

ಇಲ್ಲಿ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಿದರೆ ಬಸ್‌, ಮೆಟ್ರೊ ಪ್ರಯಾಣಿಕರಿಬ್ಬರಿಗೂ ಅನುಕೂಲವಾಗಲಿದೆ. ಸದ್ಯ ಜನರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮುಂಭಾಗದಲ್ಲಿ ವಾಹನ ನಿಲ್ಲಿಸಿ ಹೋಗುತ್ತಿದ್ದಾರೆ.

ಪಿಲ್ಲರ್‌ ಕೆಳಗಿನ ಖಾಲಿ ಜಾಗದಲ್ಲಿ ವಾಹನ ಒಯ್ದು ತಳ್ಳಾಡಿಕೊಂಡು ನಿಲ್ಲಿಸಬೇಕಾದ ಅನಿವಾರ್ಯತೆಯಿದೆ ಎಂದು ಹೊಸಹಳ್ಳಿ ನಿಲ್ದಾಣದ ಬಳಿ ಬೈಕ್‌ ಸವಾರ ಅಜಯ್‌ ಬೇಸರ ವ್ಯಕ್ತಪಡಿಸಿದರು.

ಪಾರ್ಕಿಂಗ್‌ ವೆಚ್ಚ: ನಿಲ್ದಾಣಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ನಿರ್ವಹಣೆಗೆ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ. ದ್ವಿಚಕ್ರ ವಾಹನಗಳಿಗೆ ಪ್ರತಿ ನಾಲ್ಕು ಗಂಟೆಗೆ ₹ 15, ಕಾರುಗಳಿಗೆ ₹ 30 ಪಾರ್ಕಿಂಗ್‌ ದರ ಇದೆ. ಕಚೇರಿಗೆ ಹೋಗುವ ಉದ್ಯೋಗಿ ಸರಾಸರಿ 8 ಗಂಟೆ ಅವಧಿ ಇಲ್ಲಿ ವಾಹನ ನಿಲ್ಲಿಸುತ್ತಾನೆ.

ಬೈಕ್‌ ಸವಾರರು ಪ್ರತಿದಿನ ₹ 30ನ್ನು ಪಾರ್ಕಿಂಗ್‌ ಶುಲ್ಕವಾಗಿಯೂ, ₹ 80ನ್ನು ಹೋಗಿಬರುವ ಪ್ರಯಾಣ ದರವನ್ನಾಗಿಯೂ ಪಾವತಿಸಬೇಕು. ಕಾರಿನವರು ಪಾರ್ಕಿಂಗ್‌ಗಾಗಿ ಸರಾಸರಿ ₹ 60 ವೆಚ್ಚ ಮಾಡುತ್ತಾರೆ. ಮೆಟ್ರೊ ಪಾಸ್ ಇದ್ದವರಿಗೆ ಪಾರ್ಕಿಂಗ್‌ ಶುಲ್ಕದಿಂದ ವಿನಾಯಿತಿ ನೀಡಬೇಕು. ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯಗಳ ಪೈಕಿ ಇದನ್ನೂ ಒಂದಾಗಿ ಪರಿಗಣಿಸಬೇಕು ಎಂದು ನಾಗಸಂದ್ರದಿಂದ ಎಂ.ಜಿ. ರಸ್ತೆಗೆ ನಿತ್ಯ ಪ್ರಯಾಣಿಸುವ ಉದ್ಯೋಗಿ ಶ್ರೀನಾಥ ಒತ್ತಾಯಿಸಿದರು.

ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ಎಳೆದಾಡುವುದು, ಅವುಗಳಿಗೆ ಗೀರು ಬೀಳುವುದು, ಜಗಳಗಳು ಇಲ್ಲಿ ನಿತ್ಯ ನೋಟ. ದುಬಾರಿ ಶುಲ್ಕ ವಸೂಲು ಮಾಡುವವರು ವಾಹನಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಇದೇ ಮಾತಿಗೆ ಪೂರಕವೆನಿಸುವಂತೆ ಪ್ರಯಾಣಿಕರು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ನಿಲ್ದಾಣ, ರೈಲು ಸೇವೆ ಬಗ್ಗೆ ಕೊಂಡಾಡುವ ಜನರು ಪಾರ್ಕಿಂಗ್‌ ವ್ಯವಸ್ಥೆ ಬಗ್ಗೆ ಕೊಂಚ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗೆ ಮೆಟ್ರೊ ನಿಗಮದ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ.

**

ಬೇಡಿಕೆಗಳೇನು?

* ಮೆಟ್ರೊ ವಾರ್ಷಿಕ ಪಾಸ್‌ ಹೊಂದಿರುವವರಿಗೆ ಪಾರ್ಕಿಂಗ್ ಶುಲ್ಕದಿಂದ ವಿನಾಯಿತಿ

* ಪಾರ್ಕಿಂಗ್‌ ಸ್ಥಳಗಳಲ್ಲಿ ನೆರಳಿನ ವ್ಯವಸ್ಥೆ

* ಕನಿಷ್ಠ ಪಾರ್ಕಿಂಗ್‌ ದರ ವಿಧಿಸಬೇಕು

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !