ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ರಾತ್ರಿ 9ರವರೆಗೆ ಮೆಟ್ರೊ ರೈಲು ಸೇವೆ

Last Updated 10 ಸೆಪ್ಟೆಂಬರ್ 2020, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲುಗಳು ಶುಕ್ರವಾರದಿಂದ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಸಂಚರಿಸಲಿವೆ. 173 ದಿನಗಳ ನಂತರ ಪ್ರಯಾಣಿಕರಿಗೆ ನಿರಂತರ 13 ತಾಸುಗಳವರೆಗೆ ಮೆಟ್ರೊ ಸೇವೆ ಲಭ್ಯವಾಗಲಿದೆ.

ನಾಲ್ಕು ದಿನಗಳಿಂದ ಕೇವಲ ಆರು ತಾಸುಗಳಿಗೆ ಮೆಟ್ರೊ ರೈಲು ಸೇವೆ ಸೀಮಿತವಾಗಿತ್ತು. ಆದರೆ, ಶುಕ್ರವಾರ ಬೆಳಿಗ್ಗೆ 7ರಿಂದ ನಗರದ ನಾಲ್ಕೂ ತುದಿಗಳಿಂದ ಏಕಕಾಲದಲ್ಲಿ ಹೊರಡುವ ಮೆಟ್ರೊ ರೈಲುಗಳು, ರಾತ್ರಿ 9ರವರೆಗೆ ಕಾರ್ಯಾಚರಣೆ ಮಾಡಲಿವೆ.

ದಟ್ಟಣೆಯ ಅವಧಿಯಲ್ಲಿ ಪ್ರತಿ ಐದು ನಿಮಿಷಕ್ಕೊಂದು ಹಾಗೂ ಉಳಿದ ಅವಧಿಯಲ್ಲಿ 10 ನಿಮಿಷಗಳಿಂದ 15 ನಿಮಿಷಗಳ ಅಂತರದಲ್ಲಿ ಸೇವೆ ಇರಲಿದೆ. ಇದರಿಂದ ಪ್ರಯಾಣಿಕರ ಸಂಖ್ಯೆ ತುಸು ಹೆಚ್ಚಳ ಆಗಬಹುದು ಎಂದು ಬಿಎಂಆರ್‌ಸಿಎಲ್ ನಿರೀಕ್ಷಿಸಿದೆ.

ಕೈಗಾರಿಕೆಗಳು, ವಾಣಿಜ್ಯ ಚಟುವಟಿಕೆಗಳು, ಐಟಿ-ಬಿಟಿ ಕಂಪನಿಗಳಿಗೆ ಹಿಂದಿನಂತೆ ಉದ್ಯೋಗಿಗಳು ಕಚೇರಿಗಳಿಂದ ಕೆಲಸ ಮಾಡುವ ವ್ಯವಸ್ಥೆ ಜಾರಿಯಾದ ನಂತರ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಸೇವಾವಧಿ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ನಿಗಮದ ಮೂಲಗಳು ಹೇಳಿವೆ.

‘ಗುರುವಾರ ಕೂಡ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಹಿಂದಿನ ಮೂರು ದಿನಗಳಿಗಿಂತ ಚಿತ್ರಣ ಭಿನ್ನವಾಗಿರಲಿಲ್ಲ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT