ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮೊಬೈಲ್‌ ಕಳ್ಳತನ; ಮಂಗಳಮುಖಿಯರು ಸೇರಿ ನಾಲ್ವರ ಬಂಧನ

Published 11 ಜುಲೈ 2023, 14:48 IST
Last Updated 11 ಜುಲೈ 2023, 14:48 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್ ಹಾಗೂ ಪರ್ಸ್ ದೋಚಿ ಪರಾರಿಯಾಗುತ್ತಿದ್ದ ಮೂವರು ಮಂಗಳಮುಖಿಯರು ಸೇರಿದಂತೆ ನಾಲ್ವರು ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸ್ನೇಹಾ, ಆವಿಷ್ಕಾ, ದೀಪಿಕಾ ಹಾಗೂ ಆಟೊ ಚಾಲಕ ಪ್ರಕಾಶ್ ಬಂಧಿತ ಆರೋಪಿಗಳು. ರಸ್ತೆಗಳಲ್ಲಿ ಒಂಟಿಯಾಗಿ ತೆರಳುತ್ತಿದ್ದವರನ್ನೇ ಗುರಿಯಾಗಿಸಿ ಇವರು ಸುಲಿಗೆ ಮಾಡುತ್ತಿದ್ದರು.

ಕಳೆದ ಭಾನುವಾರ ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಹೆಬ್ಬಾಳ ಮಾರ್ಗದ ಮೇಲ್ಸೇತುವೆ ಬಳಿ ಕಾದು ನಿಂತಿದ್ದ 70 ವರ್ಷದ ವೃದ್ಧರೊಬ್ಬರ ಬಳಿ ಮೂವರು ಆರೋಪಿಗಳು ಹಣ ಕೇಳಿದ್ದಾರೆ. ಅವರು ಕೇಳಿದಷ್ಟು ಹಣ ನೀಡದಿರುವಾಗ ಮೊಬೈಲ್ ಹಾಗೂ ಪರ್ಸ್‌ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT