ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮ್ ಪರಿಶೀಲನೆಯ ನೆಪದಲ್ಲಿ ಹಣ ವಂಚನೆ

Last Updated 17 ಜೂನ್ 2021, 5:38 IST
ಅಕ್ಷರ ಗಾತ್ರ

ತುಮಕೂರು: ವ್ಯಕ್ತಿಯೊಬ್ಬರ ಮೊಬೈಲ್ ಸಿಮ್ ಪರಿಶೀಲನೆ ನೆಪದಲ್ಲಿ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ಪಡೆದುಕೊಂಡು ವಂಚಿಸಲಾಗಿದೆ.

ಲಿಂಗಾಪುರದ ಪರಮ್ ಹನ್ಸ್ ತ್ರಿಪಾಠಿ ಎಂಬುವವರ ಮೊಬೈಲ್‌ಗೆ ಮೆಸೇಜ್ ಬಂದಿದ್ದು, ಅವರು ಆ ಸಂಖ್ಯೆಗೆ ಕರೆ ಮಾಡಿದಾಗ ‘ನಿಮ್ಮ ಮೊಬೈಲ್ ಸಿಮ್ ವೆರಿಫಿಕೇಷನ್ ಪ್ರೋಸೆಸ್ ಮಾಡಬೇಕು. ಅದಕ್ಕಾಗಿ ₹10 ಕಳುಹಿಸುವಂತೆ ಹೇಳಿದ್ದಾರೆ. ಅವರು ಕಳುಹಿಸಿದ ಲಿಂಕ್ ಒಪನ್ ಮಾಡಿಕೊಂಡು ಕ್ವಿಕ್ ಸಪೋರ್ಟ್ ಡೌನ್‌ಲೋಡ್ ಮಾಡಿಕೊಂಡು ಹಣ ಕಳುಹಿಸುವಂತೆ ತಿಳಿಸಿದ್ದಾರೆ’.

ಅದರಂತೆ ಲಿಂಕ್ ತೆರೆದು ಅದರಲ್ಲಿ ಎಟಿಎಂ ಕಾರ್ಡ್, ಒಟಿಪಿ ವಿವರಗಳನ್ನು ನೀಡಿದ್ದಾರೆ. ನಂತರ ಕೆನರಾ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಒಟ್ಟು ₹69,973 ಕಡಿತಗೊಂಡಿದೆ. ಮೋಸ ಮಾಡಿದವರನ್ನು ಪತ್ತೆಮಾಡಿ ಹಣ ವಾಪಸ್ ಕೊಡಿಸುವಂತೆ ದೂರು ನೀಡಿದ್ದು, ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT