ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬುದ್ಧ ಕವಯತ್ರಿ ದಾಖಲೆ ಬರೆದ ಅಮನ

Last Updated 14 ಡಿಸೆಂಬರ್ 2021, 22:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಿಷಪ್ ಕಾಟನ್‌ ಬಾಲಕಿಯರ ಶಾಲೆಯ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಅಮನ ಜೆ.ಕುಮಾರ್ ನೋಬಲ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್‌ನ ‘ಅತ್ಯಂತ ಪ್ರಬುದ್ಧ ಕವಯತ್ರಿ’ (ಮೋಸ್ಟ್‌ ಪ್ರಾಲಿಫಿಕ್ ಪೊಯೆಟ್) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

2020ರ ಏಪ್ರಿಲ್‌ನಿಂದ 2021ರ ನವೆಂಬರ್‌ ಅವಧಿಯಲ್ಲಿ ಅಮನ ಒಟ್ಟು 10,070 ಸಾಲುಗಳ 337 ಕವನಗಳನ್ನು ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ರಚಿಸಿದ್ದಾರೆ. ಕೋವಿಡ್‌, ಕುಟುಂಬ, ಪ್ರಕೃತಿ, ಹಾಸ್ಯ, ದೇವರು, ಸಾಹಿತ್ಯ, ಶಾಂತಿ ಭಾವನೆ, ಮಾನವೀಯತೆ, ರಾಷ್ಟ್ರ, ಸಮಾಜ, ಪ್ರೀತಿ, ಅನುಭವ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಕವನಗಳು ಇದರಲ್ಲಿ ಸೇರಿವೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ‘ಭಾರತದ ಅತ್ಯಂತ ಕಿರಿಯ ಕವಯತ್ರಿ’ ಹಾಗೂ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲೂ ಕವನ ರಚನೆಯಲ್ಲಿ ಅಮನ ದಾಖಲೆ ನಿರ್ಮಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT