ಭಾನುವಾರ, ಅಕ್ಟೋಬರ್ 24, 2021
21 °C

ಬೀಗರ ಜಗಳ: ಕೊಲೆಯಲ್ಲಿ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಬೀಗರ ನಡುವೆ ನಡೆದ ಜಗಳದಲ್ಲಿ ಮಹಮ್ಮದ್‌ ಮಹಮೂದ್‌ (48) ಎಂಬುವರು ಕೊಲೆಯಾಗಿದ್ದಾರೆ. ಆರೋಪಿ ನಜೀರ್‌ ಅಹಮ್ಮದ್‌ನನ್ನು (53) ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

‘ಸಿದ್ದಾರ್ಥ ಲೇಔಟ್‌ ನಿವಾಸಿ ಮಹಮೂದ್‌, ಮೆಕ್ಯಾನಿಕ್‌ ಕೆಲಸ ಮಾಡಿಕೊಂಡಿದ್ದರು. ಗೆದ್ದಲಹಳ್ಳಿಯಲ್ಲಿ ಗ್ಯಾರೇಜ್‌ವೊಂದನ್ನು ಇಟ್ಟುಕೊಂಡಿದ್ದರು. ತಮ್ಮ ಮಗಳನ್ನು ನಜೀರ್‌ ಮಗನಿಗೆ ವಿವಾಹ ಮಾಡಿಕೊಟ್ಟಿದ್ದರು. ಶನಿವಾರ ರಾತ್ರಿ ಮಹಮೂದ್‌ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು. 8.30ರ ಸುಮಾರಿಗೆ ಅಲ್ಲಿಗೆ ಹೋಗಿದ್ದ ನಜೀರ್‌, ಮಹಮೂದ್‌ ಜೊತೆ ಜಗಳ ತೆಗೆದಿದ್ದ. ಇಬ್ಬರ ನಡುವಣ ಗಲಾಟೆ ವಿಕೋಪಕ್ಕೆ ತಿರುಗಿತ್ತು. ಕುಪಿತಗೊಂಡ ನಜೀರ್‌, ದೊಣ್ಣೆಯಿಂದ ಮಹಮೂದ್‌ ತಲೆಗೆ ಬಲವಾಗಿ ಹೊಡೆದಿದ್ದ. ಸ್ಥಳದಲ್ಲೇ ಕುಸಿದು ಬಿದ್ದಿದ್ದ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವ ವಿಷಯ ಖಚಿತಪಡಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಎರಡೂ ಕುಟುಂಬಗಳ ನಡುವೆ ಮೊದಲಿನಿಂದಲೂ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಶನಿವಾರವೂ ಇಬ್ಬರ ನಡುವೆ ಪರಸ್ಪರ ವಾಗ್ವಾದ ನಡೆದಿದೆ. ನಜೀರ್‌ ಕೋ‍ಪಗೊಂಡು ದೊಣ್ಣೆಯಿಂದ ಹೊಡೆದಿದ್ದಾನೆ. ಆತನ ವಿಚಾರಣೆ
ಪ್ರಗತಿಯಲ್ಲಿದ್ದು ಮತ್ತಷ್ಟು ಮಾಹಿತಿಗಳನ್ನು ಕಲೆಹಾಕಲಾಗುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು