ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರ ಬಾ ರಸ್ತೆಯ ಬೆಂಗಳೂರು ವಸ್ತು ಸಂಗ್ರಹಾಲಯ: ವರ್ಷಾಂತ್ಯಕ್ಕೆ ಕಾರ್ಯಾರಂಭ

Published 17 ಜನವರಿ 2024, 16:16 IST
Last Updated 17 ಜನವರಿ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಕಸ್ತೂರ ಬಾ ರಸ್ತೆಯಲ್ಲಿರುವ ಬೆಂಗಳೂರು ವಸ್ತು ಸಂಗ್ರಹಾಲಯದ ನವೀಕರಣ ಕಾಮಗಾರಿ ಎಂಟು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ವರ್ಷಾಂತ್ಯಕ್ಕೆ ವೀಕ್ಷಣೆಗೆ ಲಭ್ಯವಾಗಲಿದೆ. 

₹ 8.5 ಕೋಟಿಯಲ್ಲಿ ನವೀಕರಣ ಕಾಮಗಾರಿಯನ್ನು ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕೈಗೆತ್ತಿಕೊಂಡಿದ್ದು, ಕಳೆದ ಒಂಬತ್ತು ತಿಂಗಳಿಂದ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ವಸ್ತು ಸಂಗ್ರಹಾಲಯಕ್ಕೆ ಹೊಂದಿಕೊಂಡು ₹ 26 ಕೋಟಿಯಲ್ಲಿ ಪ್ರಾಚ್ಯವಸ್ತು ಸಂಗ್ರಹ ಕೇಂದ್ರ ನಿರ್ಮಿಸಲು ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸದ್ಯ ಪ್ರಾಚ್ಯವಸ್ತುಗಳನ್ನು ಇರಿಸಲು ಸೂಕ್ತ ವ್ಯವಸ್ಥೆ ಇಲ್ಲವಾದ್ದರಿಂದ ಸಮಸ್ಯೆಯಾಗಿದೆ. 

ಬುಧವಾರ ಇಲ್ಲಿ ನಡೆದ ವೆಂಕಟಪ್ಪ ಕಲಾ ಗ್ಯಾಲರಿ ನವೀಕರಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು ವಸ್ತು ಸಂಗ್ರಹಾಲಯ ನವೀಕರಣದ ಬಗ್ಗೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರಿಗೆ ಮಾಹಿತಿ ನೀಡಿದರು. 

‘ಬೆಂಗಳೂರು ಸರ್ಕಾರಿ ವಸ್ತು ಸಂಗ್ರಹಾಲಯ ಕರ್ನಾಟಕದ ಹೆಮ್ಮೆ. 11 ಸಾವಿರ ಪ್ರಾಚ್ಯ ವಸ್ತುಗಳು ಸಂಗ್ರಹಾಲಯಕ್ಕೆ ಒಳಪಟ್ಟಿದ್ದು, ಸ್ಥಳಾವಕಾಶದ ಕೊರತೆಯಿಂದ ಎಲ್ಲ ವಸ್ತುಗಳನ್ನು ಪ್ರದರ್ಶನಕ್ಕೆ ಇರಿಸಿಲ್ಲ. ಸೂಕ್ತ ರೀತಿಯಲ್ಲಿ ಶೇಖರಿಸಿ ಇಡಲು ಸಂಗ್ರಹ ಕೇಂದ್ರ ಅಗತ್ಯ. ಕಟ್ಟಡದ ನವೀಕರಣ ಕಾಮಗಾರಿಯು ಎಂಟು ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ’ ಎಂದು ಇಲಾಖೆಯ ಪ್ರಾಚ್ಯವಸ್ತುಗಳ ಸಂರಕ್ಷಣಾ ವಾಸ್ತುಶಿಲ್ಪಿ ಶರತ್ ಚಂದ್ರ ತಿಳಿಸಿದರು. 

‘ಪಾರಂಪರಿಕ ಕಟ್ಟಡದ ಮೂಲ ವಾಸ್ತುಶಿಲ್ಪಕ್ಕೆ ಚ್ಯುತಿ ಬರದಂತೆ ನವೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಕಲಾಕೃತಿಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಸಂರಕ್ಷಿಸಲಾಗಿದೆ. ಕಲಾಕೃತಿಗಳ ಬಗೆಗಿನ ಮಾಹಿತಿಯನ್ನೂ ಡಿಜಿಟಲೀಕರಣ ಮಾಡಲಾಗುತ್ತಿದೆ. ಪಾರ್ಕಿಂಗ್ ಸೇರಿ ವಿವಿಧ ಸಮಸ್ಯೆಗಳಿಗೆ ನವೀಕರಣದ ಬಳಿಕ ಪರಹಾರ ಸಿಗಲಿದೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT