ಶುಕ್ರವಾರ, ಆಗಸ್ಟ್ 12, 2022
27 °C

₹18 ಕೋಟಿ ಮೌಲ್ಯದ ಆಸ್ತಿ ಕಬಳಿಕೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಪಾಲಿಕೆಯ ₹18 ಕೋಟಿ ಮೌಲ್ಯದ ಎರಡು ಆಸ್ತಿಗಳನ್ನು ಪಾಲಿಕೆಯ ಪುಲಕೇಶಿನಗರ ವಾರ್ಡ್‌ ಸದಸ್ಯ ಅಬ್ದುಲ್ ರಕೀಬ್‌ ಜಾಕೀರ್ ಮತ್ತು ಅವರ ಪಾಲುದಾರರು ಕಬಳಿಸಿದ್ದಾರೆ' ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷ ಎನ್‌.ಆರ್. ರಮೇಶ್ ಆರೋಪಿಸಿದ್ದಾರೆ.

ಈ ಸಂಬಂಧ ಬಿಬಿಎಂಪಿ ಆಯುಕ್ತರು ಮತ್ತು ಬಿಎಂಟಿಎಫ್‌ಗೆ ಅವರು ದೂರು ನೀಡಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫ್ರೇಜರ್ ಟೌನ್ ಬಡಾವಣೆಯ ಹೇನ್ಸ್ ರಸ್ತೆಯಲ್ಲಿರುವ 1,750 ಚದರ ಅಡಿ ವಿಸ್ತೀರ್ಣದ ಆಸ್ತಿಯನ್ನು 1983–84ರಲ್ಲಿ ಪಾಲಿಕೆ ಸದಸ್ಯರಾಗಿದ್ದ ಪಾಂಡ್ಯನ್ ಅವರಿಗೆ 50 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿತ್ತು. 2,760 ಚದರ ಅಡಿ ವಿಸ್ತೀರ್ಣದ ಮತ್ತೊಂದು ಸ್ವತ್ತನ್ನು ಕಾಂಗ್ರೆಸ್ ಮುಖಂಡರಾಗಿದ್ದ ವಿ.ರಾಮಾಂಜಲು ನಾಯ್ಡು ಅವರಿಗೆ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು‘ ಎಂದರು.

‘ಈ ಎರಡೂ ಸ್ವತ್ತನ್ನೂ ಅಬ್ದುಲ್ ರಕೀಬ್ ಜಾಕೀರ್ ಮತ್ತು ಅವರ ಪಾಲುದಾರರು ವ್ಯವಸ್ಥಿತವಾಗಿ ತಮ್ಮದಾಗಿಸಿಕೊಂಡಿದ್ದಾರೆ’ ಎಂದು ದೂರಿದರು. ಈ ಬಗ್ಗೆ ಜಾಕೀರ್ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು