ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ರೈಲು: ಇನ್ನು ಬೆಳಗಿನ ಜಾವ ಮತ್ತು ತಡರಾತ್ರಿ 20 ನಿಮಿಷ ಕಾಯಬೇಕಿಲ್ಲ

Last Updated 6 ಆಗಸ್ಟ್ 2022, 13:58 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಿನ ಜಾವ ಮತ್ತು ತಡರಾತ್ರಿ ಮೆಟ್ರೊ ರೈಲುಗಳ ಸಂಚಾರದ ಅಂತರವನ್ನು ಮತ್ತಷ್ಟು ಕಡಿಮೆ ಮಾಡಲಾಗಿದೆ.

‘ಬೆಳಿಗ್ಗೆ 5ರಿಂದ 6 ಗಂಟೆ ಮತ್ತು ರಾತ್ರಿ 10ರಿಂದ 11 ಗಂಟೆ ತನಕ ಪ್ರತಿ ರೈಲುಗಳ ಸಂಚಾರದ ನಡುವೆ ಇದ್ದ 20 ನಿಮಿಷಗಳ ಅಂತರವನ್ನು 15 ನಿಮಿಷಕ್ಕೆ ಇಳಿಸಲಾಗಿದೆ. ಸೋಮವಾರದಿಂದ ಇದು ಕಾರ್ಯರೂಪಕ್ಕೆ ಬರಲಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್) ಪ್ರಕಟಣೆ ತಿಳಿಸಿದೆ.

‘ಬೆಳಿಗ್ಗೆ 6 ಗಂಟೆಗೆ ಮುನ್ನ ಮತ್ತು ರಾತ್ರಿ 10 ಗಂಟೆಯ ನಂತರ ಮೆಟ್ರೊ ರೈಲು ಪ್ರಯಾಣಿಕರು ನಿಲ್ದಾಣಗಳಲ್ಲಿ ಗರಿಷ್ಠ 20 ನಿಮಿಷ ಕಾಯಬೇಕಾದ ಸ್ಥಿತಿ ಇತ್ತು. ಪ್ರಯಾಣಿಕರಿಗೆ ಆಗುತ್ತಿರುವ ಅನನುಕೂಲ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT