ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: 72 ಕೋಚ್‌ ಪೂರೈಕೆಗೆ 4 ಕಂಪನಿ ಆಸಕ್ತಿ

Last Updated 7 ಜುಲೈ 2022, 20:09 IST
ಅಕ್ಷರ ಗಾತ್ರ

ಬೆಂಗಳೂರು: ಎರಡನೇ ಹಂತದ ‘ನಮ್ಮ ಮೆಟ್ರೊ’ ರೈಲು ಯೋಜನೆ 73 ಕಿಲೋ ಮೀಟರ್‌ ಮಾರ್ಗದ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, 72 ಹೊಸ ರೈಲು ಕೋಚ್‌ಗಳನ್ನು ಪೂರೈಸಲು ನಾಲ್ಕು ಕಂಪನಿಗಳು ಮುಂದೆ
ಬಂದಿವೆ.

ಚೀನಾ ಮೂಲದ ಸಿಆರ್‌ಆರ್‌ಸಿ ವೇಳಾಪಟ್ಟಿಯ ಪ್ರಕಾರ 216 ಕೋಚ್‌ಗಳನ್ನು ಪೂರೈಸಲು ವಿಫಲವಾದ ಬಳಿಕ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್) ಏಪ್ರಿಲ್‌ನಲ್ಲಿ ಟೆಂಡರ್ ಆಹ್ವಾನಿಸಿತ್ತು.

6 ಕೋಚ್‌ಗಳನ್ನು ಒಳಗೊಂಡ 12 ರೈಲುಗಳನ್ನು ಪಡೆಯಲು ಟೆಂಡರ್ ಕರೆಯಲಾಗಿತ್ತು. ‌ಆರ್‌.ವಿ.ರಸ್ತೆ–ಬೊಮ್ಮಸಂದ್ರ (ರೀಚ್–5) 19 ಕಿಲೋ ಮೀಟರ್‌ ಮಾರ್ಗದ ಕಾಮಗಾರಿ 2023ರ ಜೂನ್‌ ವೇಳೆಗೆ ಸಂಚಾರಕ್ಕೆ ಸಿದ್ಧವಾಗಲಿದೆ. ಈ ಮಾರ್ಗಕ್ಕೆ ಈ ಕೋಚ್‌ಗಳನ್ನು ಬಳಸಿಕೊಳ್ಳಲು ಬಿಎಂಆರ್‌ಸಿಎಲ್
ಉದ್ದೇಶಿಸಿದೆ.

‘ಬಿಎಎಂಎಲ್‌, ಅಲ್‌ಸ್ಟಂ ಟ್ರಾನ್ಸ್‌ಪೋರ್ಟ್‌, ಮಿಟ್ಸುಬಿಷಿ ಎಲೆಕ್ಟ್ರಿಕ್ ಮತ್ತು ಟಿಟಾಗರ್ ವ್ಯಾಗನ್ಸ್‌ ಲಿಮಿಟೆಡ್‌ ಟೆಂಡರ್‌ನಲ್ಲಿ ಭಾಗವಹಿಸಿವೆ. ಈ ಎಲ್ಲಾ ಸಂಸ್ಥೆಗಳು ದೇಶದಾದ್ಯಂತ ವಿವಿಧ ಮೆಟ್ರೊ ನಿಗಮಗಳಿಗೆ ಕೋಚ್‌ಗಳನ್ನು ಪೂರೈಸಿರುವ ಅನುಭವ ಹೊಂದಿವೆ. ಈ ಬಿಡ್‌ಗಳ ತಾಂತ್ರಿಕ ಮೌಲ್ಯಮಾಪನ ನಡೆಸಲಾಗುತ್ತಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಸಿಲ್ಕ್ ಬೋರ್ಡ್‌–ಜಯದೇವ ಇಂಟರ್‌ ಚೇಂಜ್ ನಿಲ್ದಾಣ ಸೇರಿ ಈ ಮಾರ್ಗದ ಸಿವಿಲ್ ಕಾಮಗಾರಿಯನ್ನು ಬಹುತೇಕ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳಿಸಿ, 2023ರ ಜುಲೈ ವೇಳೆಗೆ ಉಳಿಕೆ ಕಾಮಗಾರಿಯನ್ನೂ ಪೂರ್ಣಗೊಳಿಸಲು ಉದ್ದೇಶಿಸಿದೆ.

ಬೊಮ್ಮಸಂದ್ರ ಮತ್ತು ಬೊಮ್ಮನಹಳ್ಳಿ ಮಾರ್ಗದ ಸಿವಿಲ್ ಕಾಮಗಾರಿಯೂ ಶೇ 99ರಷ್ಟು ಪೂರ್ಣಗೊಂಡಿದೆ. ಎಚ್‌ಎಸ್‌ಆರ್‌ ಲೇಔಟ್‌ –ಆರ್.ವಿ. ರಸ್ತೆ ಮಾರ್ಗದ ಕಾಮಗಾರಿ ಶೇ 93ರಷ್ಟು ಪೂರ್ಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT