ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮ ಅನುಮತಿ, ಕಿರುಕುಳ ನಿಲ್ಲಲಿ: ನಾರಾಯಣ ಮೂರ್ತಿ ಕಿವಿಮಾತು

ಜಿಎಸ್‌ಟಿ ದಿನ
Last Updated 1 ಜುಲೈ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ಯಮಗಳಿಗೆ ಕೇಂದ್ರ ಸರ್ಕಾರದಿಂದ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಆದರೆ ರಾಜ್ಯಗಳು ಮಾತ್ರ ಹಲವು ಅನುಮತಿ ನೀಡಿಕೆಯಲ್ಲಿ ತಮ್ಮ ಎಂದಿನ ಕಿರುಕುಳ ಮುಂದುವರಿಸಿವೆ. ಇದನ್ನು ನಿವಾರಿಸಲೇಬೇಕು’ ಎಂದು ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ಹೇಳಿದರು.

ಇಲ್ಲಿನ ಆದಾಯ ತೆರಿಗೆ ಕಚೇರಿಯಲ್ಲಿ ಸೋಮವಾರ ನಡೆದ 2ನೇ ವರ್ಷದಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಭಾರತಕ್ಕೆ ಕಳೆದ 300 ವರ್ಷಗಳಿಂದ ಜಾಗತಿಕ ಮಟ್ಟದಲ್ಲಿಗೌರವ ಇರಲಿಲ್ಲ. ಇದೀಗ ಅದು ದೊರಕಿದೆ. ಇದೇ ಅವಕಾಶವನ್ನು ಬಳಸಿ
ಕೊಂಡು ದೇಶದ ಬಡತನವನ್ನು ನಿವಾರಿಸುವ ಗಂಭೀರ ಪ್ರಯತ್ನ ಮಾಡಲೇಬೇಕು. ಅದಕ್ಕಾಗಿ ಎಲ್ಲರೂ ತಮ್ಮ ಶಕ್ತಿ ಮೀರಿ ಶ್ರಮಿಸಬೇಕು’ ಎಂದರು.

‘ಉದ್ಯಮಿಗಳಿಗೆ ಸರ್ಕಾರ ಮುಕ್ತ ಸ್ವಾತಂತ್ರ್ಯ ನೀಡಬೇಕು, ತೆರಿಗೆ ಸಂಗ್ರಹ ವಿಧಾನವನ್ನು ಇನ್ನಷ್ಟು ಸರಳಗೊಳಿ
ಸಬೇಕು ಹಾಗೂ ಸಂಗ್ರಹಿಸಿದ ತೆರಿಗೆ ದಕ್ಷವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಈ ಮೂರು ಸವಾಲುಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಬೇಕು’ ಎಂದು ಅವರು ಸಲಹೆ
ನೀಡಿದರು.

‘ಬ್ರಿಟನ್‌ನಲ್ಲಿ 1973ರಲ್ಲೇ ಸಮರ್ಥವ್ಯಾಟ್‌ ಪದ್ಧತಿ ಜಾರಿಗೆ ಬಂದಿತ್ತು. ದೇಶದಲ್ಲಿ 43 ವರ್ಷಗಳ ಬಳಿಕ ಜಿಎಸ್‌ಟಿ
ವ್ಯವಸ್ಥೆ ಬಂದಿದೆ. ಇದನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಿದೆ, ರಾಜ್ಯಗಳೂ ಸಹಕಾರ ನೀಡಿವೆ’ ಎಂದ ಅವರು, ‘ನಮ್ಮ ವೈಯಕ್ತಿಕ ಸುಖವನ್ನು ಬದಿಗೊತ್ತಿ, ದೇಶದ ಪ್ರಗತಿ ದೃಷ್ಟಿಯಿಂದ ದುಡಿಯುವ ಮನೋಭಾವ ಎಲ್ಲರಲ್ಲೂ ಮೂಡಬೇಕು’ ಎಂದರು.

ಸೆಲ್ಕೊ ಕಂಪನಿಯ ಸಹ ಸಂಸ್ಥಾಪಕ ಹರೀಶ್‌ ಹಂದೆ ಮಾತನಾಡಿ, ಗ್ರಾಮೀಣ ಭಾರತ ಉದ್ಯಮವನ್ನು ಮುನ್ನಡೆಸುವ ಹಂತಕ್ಕೆ ಬರಬೇಕು, ಗ್ರಾಮೀಣ ಕೌಶಲಕ್ಕೆ ಉತ್ತೇಜನ ನೀಡಬೇಕು. ಆಫ್ರಿಕ, ಲ್ಯಾಟಿನ್‌ ಅಮೆರಿಕ ಸಹಿತ ಹಲವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮುಂದಿನ ದಿನಗಳಲ್ಲಿ ಭಾರತವೇ ದೊಡ್ಡ ಮಾರುಕಟ್ಟೆ ಒದಗಿಸುವ ವಾತಾವರಣ ನಿರ್ಮಿಸಬೇಕು ಎಂದರು.

ಕೇಂದ್ರೀಯ ತೆರಿಗೆಗಳಇಲಾಖೆಯ ಪ್ರಧಾನ ಮುಖ್ಯ ಆಯುಕ್ತ ಡಿ.ಆರ್‌.ನಾಗೇಂದ್ರ ಕುಮಾರ್‌ ಅವರು ಅಕ್ಟೋಬರ್‌ 1ರಿಂದ ಎರಡನೇ ಹಂತದ ಜಿಎಸ್‌ಟಿ ಜಾರಿಗೆ ಬರುತ್ತಿರುವುದನ್ನು ಹಾಗೂ ಜಿಎಸ್‌ಟಿ ಇನ್ನಷ್ಟು ಸರಳವಾಗಿರುವುದನ್ನು ತಿಳಿಸಿದರು.

ಆದಾಯ ತೆರಿಗೆ ಇಲಾಖೆಯ ಮುಖ್ಯ ಅಧಿಕಾರಿ ಬಿ.ಆರ್‌.ಬಾಲಕೃಷ್ಣನ್‌, ಕೇಂದ್ರೀಯ ತೆರಿಗೆಯ ಮುಖ್ಯ ಆಯುಕ್ತ ಎ.ಕೆ.ಜ್ಯೋತಿಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT