ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತ ವ್ಯಕ್ತಿಯಿಂದ ಸೈಕಲ್‌ನಲ್ಲಿ ಪರ್ಯಟನೆ: ರಾಜ್ಯಕ್ಕೆ ಆಗಮನ

Last Updated 23 ಮಾರ್ಚ್ 2023, 23:39 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತ ನಗರದ ಸುದೀಪ್ ದಾಸ್ ಎಂಬುವರು ‘ದೇಶವನ್ನು ಮಾಲಿನ್ಯ ಮುಕ್ತವಾಗಿ ಮಾಡಲು ಸೈಕಲ್ ಬಳಸಬೇಕು, ಮರ ಉಳಿಸಬೇಕು’ ಎಂದು ಜನರಲ್ಲಿ ಜಾಗೃತಿ ಮೂಡಿಸಲು 28 ರಾಜ್ಯಗಳಲ್ಲಿ ಸೈಕಲ್ ಪರ್ಯಟನೆ ಕೈಗೊಂಡಿದ್ದಾರೆ.

ಅಗತ್ಯ ವಸ್ತುಗಳನ್ನು ಕಟ್ಟಿಕೊಂಡು, ಸಾಮಾನ್ಯ ಸೈಕಲ್ ಒಂದರಲ್ಲಿ ಇಂಗ್ಲಿಷ್‌ನಲ್ಲಿ ಬರೆದ ಸಂದೇಶವನ್ನು ಅಳವಡಿಸಿಕೊಂಡು ಸಂಚರಿಸುತ್ತಿದ್ದಾರೆ.

ಸಣ್ಣಪುಟ್ಟ ಕೆಲಸಗಳಿಗೆಲ್ಲ ಕಾರು, ದ್ವಿಚಕ್ರ ವಾಹನಗಳನ್ನು ಬಳಸುವ ಬದಲು ಸೈಕಲ್‌ ಬಳಸಿದರೆ ಅವುಗಳಿಂದ ಪರಿಸರಕ್ಕೆ ಆಗುವ ಮಾಲಿನ್ಯವು ತಪ್ಪುತ್ತದೆ. ಆರೋಗ್ಯವು ಸುಧಾರಿಸುತ್ತದೆ ಎಂದು ಸುದೀಪ್‌ ದಾಸ್‌ ಹೇಳಿದರು.

ಪರಿಸರದ ಸಮತೋಲನಕ್ಕೆ ಅಗತ್ಯವಾದ ಮರಗಳನ್ನು ಅಭಿವೃದ್ಧಿಯ ಹೆಸರಲ್ಲಿ ಕಡಿಯುವುದು ನಿಲ್ಲಿಸಬೇಕು. ಇದರಿಂದ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಬಹುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT