ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ಧ್ವಜ ದಿನ: ವಿಶೇಷ ಲಕೋಟೆ ಬಿಡುಗಡೆ

Published 22 ಜುಲೈ 2023, 22:26 IST
Last Updated 22 ಜುಲೈ 2023, 22:26 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಧ್ವಜ ದಿನದ ಅಂಗವಾಗಿ ಅಂಚೆ ಇಲಾಖೆ ಕರ್ನಾಟಕ ವೃತ್ತದಿಂದ ವಿಶೇಷ ಲಕೋಟೆ ಮತ್ತು ವಿಶೇಷ ರಾಖಿ ಲಕೋಟೆಯನ್ನು ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್‌ ಎಸ್‌. ರಾಜೇಂದ್ರ ಕುಮಾರ್‌ ಬಿಡುಗಡೆ ಮಾಡಿದರು.

ವಿಶೇಷ ಲಕೋಟೆಗಳು ಬೆಂಗಳೂರು ಜಿಪಿಒ ಅಂಚೆಚೀಟಿಗಳ ಸಂಗ್ರಹಾಲಯ, ಮಂಗಳೂರು, ಮೈಸೂರು ಮತ್ತು ಕರ್ನಾಟಕ ಪೋಸ್ಟಲ್ ಸರ್ಕಲ್‌ನಲ್ಲಿರುವ ಬೆಳಗಾವಿ ಮುಖ್ಯ ಕಚೇರಿಗಳಲ್ಲಿ ಮತ್ತು ಇ-ಪೋಸ್ಟ್ ಆಫೀಸ್‌ನಲ್ಲಿ (www.Indiapost.gov.in) ಮಾರಾಟಕ್ಕೆ ಲಭ್ಯವಿದೆ ಎಂದು ರಾಜೇಂದ್ರ ಕುಮಾರ್‌ ತಿಳಿಸಿದರು.

ರಕ್ಷಾ ಬಂಧನ ಆಚರಣೆಯ ಸಂದರ್ಭದಲ್ಲಿ ‘ರಾಖಿ ಪೋಸ್ಟ್’ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಶುಭಾಶಯ ಕಳುಹಿಸಲು ಸಹಾಯ ಮಾಡಲಿದೆ. ಆಗಸ್ಟ್‌ 26ರವರೆಗೆ ಈ ಸೇವೆ ಇರಲಿದ್ದು, ಭಾರತದ ಯಾವುದೇ ಮೂಲೆಯ ವಿಳಾಸ ನೀಡಿದರೂ ತಲುಪಿಸಲಾಗುವುದು. ಆ.10ರ ನಂತರ https://www.karnatakapost.gov.in/Rakhi_Post ಗೆ ಪ್ರವೇಶಿಸುವ ಮೂಲಕ ರಾಖಿ ಪೋಸ್ಟ್ ಸೇವೆ ಪಡೆಯಬಹುದು ಎಂದು ಮಾಹಿತಿ ನೀಡಿದರು.

ರಾಖಿ ಲಕೋಟೆಗಳು ಕರ್ನಾಟಕದಲ್ಲಿ ₹ 15ಕ್ಕೆ ಎಲ್ಲ ಪ್ರಧಾನ ಅಂಚೆ ಕಛೇರಿಗಳು ಮತ್ತು ಇತರ ಆಯ್ದ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ನಿಮ್ಮ ಆಯ್ಕೆಯ ರಾಖಿಯನ್ನು ವರ್ಣರಂಜಿತ ಲಕೋಟೆಗಳಲ್ಲಿ ಲಗತ್ತಿಸಬಹುದು.  ಲೆಟರ್ ಪೋಸ್ಟ್‌ಗಳು, ರಿಜಿಸ್ಟರ್ಡ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬಹುದು ಎಂದರು.

ಪೋಸ್ಟ್ ಮಾಸ್ಟರ್ ಜನರಲ್‌ ಎಲ್.ಕೆ. ಡ್ಯಾಶ್, ಅಂಚೆ ಸೇವೆ ನಿರ್ದೇಶಕಿ ಕೈಯ ಆರೋರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT