ನೀಟ್: ಎಕ್ಸೆಲ್‌ ಕೇಂದ್ರದಿಂದ ತರಬೇತಿ

ಶುಕ್ರವಾರ, ಜೂನ್ 21, 2019
24 °C

ನೀಟ್: ಎಕ್ಸೆಲ್‌ ಕೇಂದ್ರದಿಂದ ತರಬೇತಿ

Published:
Updated:

ಬೆಂಗಳೂರು: ನೀಟ್‌, ಜೆಇಇ ಸಿಇಟಿ, ಕಾಮೆಡ್‌–ಕೆ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಎಕ್ಸೆಲ್‌ ಅಕಾಡೆಮಿಕ್ಸ್‌ ಕೋಚಿಂಗ್‌ ಸಂಸ್ಥೆ ಈ ಸಾಲಿನ ತರಬೇತಿಯನ್ನು ಪ್ರಾರಂಭಿಸಿದೆ. ವೈದ್ಯಕೀಯ, ಎಂಜಿನಿಯರಿಂಗ್‌ ಹಾಗೂ ಐಐಟಿ ಪರೀಕ್ಷೆಗಳಲ್ಲಿ ಸಾಕಷ್ಟು ರ‍್ಯಾಂಕ್‌ಗಳನ್ನು ಈ ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿದ್ದಾರೆ. 

ರಾಜ್ಯ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗುಜರಾತ್, ದೆಹಲಿ ಮುಂತಾದ ಕಡೆಗಳಿಂದ ವಿದ್ಯಾರ್ಥಿಗಳು ನಗರದಲ್ಲಿರುವ ಈ ಸಂಸ್ಥೆಗೆ ತರಬೇತಿಗೆ ಬರುತ್ತಾರೆ. 

ನೀಟ್‌ ತಯಾರಿ ಜೊತೆಗೆ ಎಐಐಎಂಎಸ್‌ ಮತ್ತು ಜೆಐಪಿಎಂಇಆರ್ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ 280ರಿಂದ 300 ಪರೀಕ್ಷೆಗಳು ನಡೆಯುತ್ತವೆ. ಅಲ್ಲದೆ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಆನ್‌ಲೈನ್‌ ವ್ಯವಸ್ಥೆಯ ಗ್ರಂಥಾಲಯ ಸೌಲಭ್ಯ ಇದೆ. ದೂರದ ಊರು, ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆ ಇದೆ ಎಂದು ಸಂಸ್ಥೆಯ ಡಾ. ಎಸ್.ವಿ. ಸೋಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

‘ಸಂಸ್ಥೆಯಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೆ ತರಬೇತಿ ನೀಡಲಾಗುತ್ತದೆ. ಪ್ರತಿನಿತ್ಯ 2 ಗಂಟೆ ಭೌತವಿಜ್ಞಾನ, 2 ಗಂಟೆ ರಸಾಯನವಿಜ್ಞಾನ, 2 ಗಂಟೆ ಜೀವವಿಜ್ಞಾನದ ತರಗತಿಗಳನ್ನು ನಡೆಸಲಾಗುತ್ತದೆ. ತರಬೇತಿ ನೀಡಿದ ವಿಷಯಗಳ ಪರೀಕ್ಷೆ ಅಂದೇ ಮಾಡಲಾಗುತ್ತದೆ. ಫಲಿತಾಂಶವನ್ನು ಎಸ್‌ಎಂಎಸ್‌ ಮೂಲಕ ಪೋಷಕರಿಗೆ ಕಳುಹಿಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ವಿಳಾಸ– ಎಕ್ಸೆಲ್‌ ಅಕಾಡೆಮಿಕ್ಸ್‌ ಸಂಸ್ಥೆ, ಯಲಹಂಕ ಉಪನಗರ, ಶೇಷಾದ್ರಿಪುರ ಕಾಲೇಜು ಹತ್ತಿರ. ಬೆಂಗಳೂರು–560064. ದೂರವಾಣಿ ಸಂಖ್ಯೆ: 76769–17777, 90363–57499

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !