ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿಯಲ್ಲಿ ಅಂಗವಿಕಲರಿಗೆ ಮೀಸಲಾತಿ: ಪರಿಷ್ಕೃತ ಆದೇಶ

Last Updated 28 ಸೆಪ್ಟೆಂಬರ್ 2020, 20:08 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಂಗವಿಕಲರಿಗೆ ಗ್ರೂಪ್‌ 'ಎ', 'ಬಿ' ಹುದ್ದೆಗಳ ನೇರ ನೇಮಕಾತಿಯಲ್ಲಿ ಶೇ 4 ಹಾಗೂ ಗ್ರೂಪ್‌ ‘ಸಿ’ ಮತ್ತು ‘ಡಿ’ ಹುದ್ದೆಗಳಲ್ಲಿ ಶೇ 5ರಷ್ಟು ಮೀಸಲಾತಿಯಡಿ ರಿಕ್ತ ಸ್ಥಾನಗಳನ್ನು ಗುರುತಿಸಿ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.

100 ರಿಕ್ತ ಸ್ಥಾನಗಳಿಗೆ ಅನ್ವಯಿಸಿ ಗ್ರೂಪ್‌ ‘ಎ’ ಮತ್ತು ‘ಬಿ’ ಹುದ್ದೆಗಳಲ್ಲಿ ದೃಷ್ಟಿ ಮಾಂದ್ಯರಿಗೆ ಶೇ 1 (4), ಶ್ರವಣ ದೋಷ ಇರುವವರಿಗೆ ಶೇ 1 (44) ಮಿದುಳಿನ ಪಾರ್ಶ್ವವಾಯು, ಕುಷ್ಠರೋಗ ನಿವಾರಿತ ವ್ಯಕ್ತಿಗಳು, ಕುಬ್ಜತೆ, ಆ್ಯಸಿಡ್‌ ದಾಳಿಗೆ ತುತ್ತಾದವರು ಮತ್ತು ಬಹುವಿಧ ಸ್ನಾಯು ಸವೆತಗೊಂಡವರಿಗೆ ಶೇ 1 (24), ಆಟಿಸಂ ಸೇರಿದಂತೆ ಇತರೆ ಬಹುವಿಧ ಅಂಗವಿಕಲತೆ ಇರುವರಿಗೆ ಶೇ 1 (64) ಮೀಸಲಾತಿ ಹಂಚಿಕೆ ಮಾಡಲಾಗಿದೆ.

ಗ್ರೂಪ್‌ ‘ಸಿ‌’ ಮತ್ತು ‘ಡಿ’ ಹುದ್ದೆಗಳಲ್ಲಿ ದೃಷ್ಟಿಮಾಂದ್ಯರಿಗೆ ಶೇ 1 (4), ಶ್ರವಣದೋಷ ಇರುವವರಿಗೆ ಶೇ 1 (44), ಮೆದುಳಿನ ಪಾರ್ಶ್ವವಾಯು, ಕುಷ್ಠರೋಗ ನಿವಾರಿತ ವ್ಯಕ್ತಿಗಳು, ಕುಬ್ಜತೆ, ಆ್ಯಸಿಡ್‌ ದಾಳಿಗೆ ತುತ್ತಾದವರಿಗೆ ಮತ್ತು ಬಹುವಿಧ ಸ್ನಾಯು ಸವೆತಗೊಂಡವರಿಗೆ ಶೇ 2 (24, 84), ಆಟಿಸಂ ಸೇರಿದಂತೆ ಇತರೆ ಬಹುವಿಧ ಅಂಗವಿಕಲತೆ ಇರುವರಿಗೆ ಶೇ 1 (64) ಮೀಸಲಾತಿ ಹಂಚಿಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT