ಭಾನುವಾರ, ಅಕ್ಟೋಬರ್ 2, 2022
20 °C

ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೊಸ ನಿಯಮ: ಪಾರ್ಸೆಲ್‌ಗೆ ಅನುಮತಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಇತ್ತೀಚೆಗೆ ಬಂದಿದ್ದ ಕೋರಿಯರ್ ಪಾರ್ಸೆಲ್‌ನಲ್ಲಿ ಡ್ರಗ್ಸ್ ಪತ್ತೆಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಜೈಲಿನಲ್ಲಿ ಹೊಸ ನಿಯಮ ರೂಪಿಸಲಾಗಿದ್ದು, ಕೊರಿಯರ್ ಪಾರ್ಸೆಲ್‌ ಕಳುಹಿಸಲು ಹಾಗೂ ಪಡೆಯಲು ಅಧೀಕ್ಷಕರ ಅನುಮತಿ ಕಡ್ಡಾಯಗೊಳಿಸಲಾಗಿದೆ.

ಈ ಬಗ್ಗೆ ಸಿಬ್ಬಂದಿಗೆ ಸೂಚನೆ ನೀಡಿರುವ ಜೈಲಿನ ಮುಖ್ಯ ಅಧೀಕ್ಷಕ, ‘ಅನುಮತಿ ಇಲ್ಲದ ಕೊರಿಯರ್ ಪಾರ್ಸೆಲ್‌ಗಳನ್ನು ಜೈಲಿನ ಸಿಬ್ಬಂದಿ ಸ್ವೀಕರಿಸಬಾರದು’ ಎಂದಿದ್ದಾರೆ.

‘ಯಾವುದೇ ಪಾರ್ಸೆಲ್ ಪಡೆಯಬೇಕಾದರೆ, ವಾರದ ಮುಂಚೆಯೇ ಜೈಲಿ‌ನ ಮುಖ್ಯ ಅಧೀಕ್ಷಕರಿಂದ ಅನುಮತಿ ಪಡೆಯಬೇಕು. ಪಾರ್ಸೆಲ್‌ನಲ್ಲಿ ಏನಿರುತ್ತೆ? ಎಂಬುದನ್ನು ತಿಳಿಸಬೇಕು. ಅನುಮತಿ ಪಡೆಯದಿದ್ದರೆ, ಪಾರ್ಸೆಲ್ ವಾಪಸು ಕಳುಹಿಸಲಾಗುವುದು. ಈ ಬಗ್ಗೆ ಕೈದಿಗಳು, ಸಂಬಂಧಿಕರು ಹಾಗೂ ಇತರರಿಗೆ ತಿಳಿಸಬೇಕು’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು