ಬೆಂಗಳೂರು: ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ನೀಡುವ 2025ನೇ ಸಾಲಿನ ‘ಪ್ರೊ.ಕಿ.ರಂ. ನಾಗರಾಜ ಸಂಸ್ಕೃತಿ’ ಪ್ರಶಸ್ತಿಗೆ ಲೇಖಕಿ ವಿಜಯಾ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಕಿ.ರಂ. ನಾಗರಾಜ ಅವರ ಜನ್ಮ ದಿನವಾದ ಡಿ. 25ರಂದು ಸಂಜೆ 6 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ವೇದಿಕೆಯ ಅಧ್ಯಕ್ಷ ನಲ್ಲೂರು ಪ್ರಸಾದ್ ಆರ್.ಕೆ., ತಿಳಿಸಿದ್ದಾರೆ.

ಕವನ ಸಂಕಲನ ಆಹ್ವಾನ

ಬೆಂಗಳೂರು: ಶೂದ್ರ ಶ್ರೀನಿವಾಸ್ ನೆಲದ ಮಾತು ಪ್ರತಿಷ್ಠಾನವು ಶೂದ್ರ ಪತ್ರಿಕೆಯ ‘ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ’ಗೆ ಕವನ ಸಂಕಲನಗಳನ್ನು ಆಹ್ವಾನಿಸಿದೆ.

2024ರಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾಗಿರುವ ಕವನ ಸಂಕಲನಗಳನ್ನು ಪರಿಗಣಿಸಲಾಗುತ್ತದೆ. ಪ್ರಶಸ್ತಿಯು ₹15 ಸಾವಿರ ನಗದು ಒಳಗೊಂಡಿದೆ. ಆಸಕ್ತರು ಕವನ ಸಂಕಲನದ ಎರಡು ಪ್ರತಿಗಳನ್ನು ಇದೇ 31ರೊಳಗೆ ಮಾನಸ ವಿದ್ಯಾಕೇಂದ್ರ, ಅಣ್ಣಯ್ಯ ರೆಡ್ಡಿ ಬಡಾವಣೆ, ಜೆ.ಪಿ.ನಗರ 6ನೇ ಹಂತ, ಬೆಂಗಳೂರು 560078 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಚ್. ದಂಡಪ್ಪ ತಿಳಿಸಿದ್ದಾರೆ.

ಸಂಪರ್ಕಕ್ಕೆ: 9481485109

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.