ಬೆಂಗಳೂರು:ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್)ಹೊರ ರೋಗಿಗಳ ವಿಭಾಗದ ಕಟ್ಟಡದಲ್ಲಿ ಮಾಹಿತಿ ಕೇಂದ್ರವನ್ನು ಆರಂಭಿಸಲಾಗಿದೆ. ವಾರದ ಎಲ್ಲ ದಿನ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3.30ರವರೆಗೆ ಈ ಕೇಂದ್ರವು ತೆರೆದಿರುತ್ತದೆ.

ನಿಮ್ಹಾನ್ಸ್‌ನ ಮನೋವಿಜ್ಞಾನ ಸಾಮಾಜಿಕ ಕಾರ್ಯ ವಿಭಾಗವು ನಿರ್ವಹಿಸಲಿರುವ ಈ ಮಾಹಿತಿ ಕೇಂದ್ರವನ್ನು ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ ಇತ್ತೀಚೆಗೆ ಉದ್ಘಾಟಿಸಿದರು.

ಯಾವ ಮಾಹಿತಿ ಲಭ್ಯ:

*ಸರ್ಕಾರದ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳು

* ಅಂಗವಿಕಲರ ಪ್ರಮಾಣಪತ್ರ, ನಿರ್ದಿಷ್ಟ ಗುರುತಿನ ಚೀಟಿ, ಅಂಗವಿಕಲರ ಪಿಂಚಣಿ, ಸಂಚಾರ ಭತ್ಯೆ

* ವಿಮೆ (ಆಯುಷ್ಮಾನ್ ಭಾರತ್), ವಿಮಾ ನೌಕರರ ಸೌಲಭ್ಯಗಳು, ಶೈಕ್ಷಣಿಕ ಸೌಲಭ್ಯ, ಆದಾಯ ತೆರಿಗೆ ವಿನಾಯಿತಿ, ಸಾಲ ಸೌಲಭ್ಯ

* ಕೌಶಲ ತರಬೇತಿ ಕೇಂದ್ರಗಳು, ವಸತಿ ಯೋಜನೆ, ಪಿಂಚಣಿ ವರ್ಗಾವಣೆ, ಉಚಿತ ಕಾನೂನು ಸೇವೆಗಳು ಮತ್ತು ಆಂಬುಲೆನ್ಸ್ ಸೇವೆಗಳು

* ಮಾನಸಿಕ ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನು ಹೊಂದಿರುವವರಿಗೆ ಪುನರ್ವಸತಿ ಕೇಂದ್ರಗಳ ಬಗ್ಗೆ ಮಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.