ಭಾನುವಾರ, ಜುಲೈ 25, 2021
26 °C

ನಾಲ್ಕು ದಿನ ವಿದ್ಯುತ್‌ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಡಿಗೆಹಳ್ಳಿ ಉಪಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿ ಕೊಳ್ಳಲಾಗುತ್ತಿರುವುದರಿಂದ ಬುಧ ವಾರ (ಜೂನ್‌ 17) ಬೆಳಿಗ್ಗೆ 10ರಿಂದ ಶನಿವಾರ ಸಂಜೆ 4ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆ ಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. 

ಕೊಡಿಗೆಹಳ್ಳಿ, ಬಿಬಿಎಂಪಿ ಪ್ಲಾಂಟ್, ಸ್ಕಂದನಗರ, ಚಿಕ್ಕಗೊಲ್ಲರಹಟ್ಟಿ, ಕನ್ನ ಹಳ್ಳಿ, ಸೀಗೆಹಳ್ಳಿ, ಅನಿಕೇತನ ನಗರ, ಸೀಗೆಹಳ್ಳಿ ಕೈಗಾರಿಕಾ ಪ್ರದೇಶ, ಪಾರ್ವತಿ ಬಡಾವಣೆ ಹಾಗೂ ಸುತ್ತ–ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ. 

ನಾಳೆಯೂ ವ್ಯತ್ಯಯ: ವಿಜಯನಗರ ಉಪಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಜೂನ್‌ 18ರ ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಹೊಸಹಳ್ಳಿ, ವಿಜಯನಗರ, ಆರ್.ಪಿ.ಸಿ. ಲೇಔಟ್, ಗೋವಿಂದರಾಜ ನಗರ, ಎಂ.ಸಿ. ಲೇಔಟ್, ಮಾರೇನ ಹಳ್ಳಿ, ವಿನಾಯಕ ಲೇಔಟ್, ಪಿಸಿಐ ಕೈಗಾರಿಕಾ ಪ್ರದೇಶ, ಕಾವೇರಿಪುರ, ನಾಗರಬಾವಿ, ತಿಮ್ಮೇನಹಳ್ಳಿ, ಕೆಎಚ್‌ಬಿ ಕಾಲೊನಿ, ಪ್ರಶಾಂತನಗರ, ಕಾಮಾಕ್ಷಿ ಪಾಳ್ಯ, ಮಾಗಡಿ ರಸ್ತೆ, ಸಿದ್ದಯ್ಯ ಪುರಾಣಿಕ ರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಮೆಲ್‌ ಲೇಔಟ್‌, ಭುವನೇಶ್ವರಿ ನಗರ, ಹಾವನೂರು ವೃತ್ತ, ಶಕ್ತಿಗಣಪತಿ ನಗರ, ಮಂಜು ನಾಥ ನಗರ, ಚೆನ್ನಿಗಪ್ಪ ಲೇಔಟ್‌, ಶಾರದಾ ಕಾಲೊನಿ, ಎಸ್‌ಬಿಐ ಕಾಲೊನಿ, ಮೀನಾಕ್ಷಿ ನಗರ, ರಾಮನ್‌ ಪಾಲಿಟೆಕ್ನಿಕ್‌ ಕಾಲೇಜು ಮತ್ತು ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು