ಬೆಂಗಳೂರು: ‘ಕೇಂದ್ರ ಸರ್ಕಾರವು ‘ವಿಬಿ–ಜಿ ರಾಮ್ ಜಿ’ ಕಾಯ್ದೆಯನ್ನು ತಕ್ಷಣವೇ ರದ್ದುಗೊಳಿಸಿ, ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆ ಮುಂದುವರಿಸಬೇಕು’ ಎಂದು ಆಗ್ರಹಿಸಿರುವ ನರೇಗಾ ಸಂಘರ್ಷ ಮೋರ್ಚಾ, ಇದೇ 5ರಿಂದ ದೇಶದಾದ್ಯಂತ ಕಾಂಗ್ರೆಸ್ ಆರಂಭಿಸುತ್ತಿರುವ ‘ಮನರೇಗಾ ಉಳಿಸಿ’ ಆಂದೋಲನಕ್ಕೆ ಬೆಂಬಲ ಸೂಚಿಸಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾವೇರಿ ಜಿಲ್ಲಾ ವೇತನ ಕಾರ್ಮಿಕರ ಸಂಘದ ಅಧ್ಯಕ್ಷೆ ಗುತ್ತಮ್ಮ ಸುನಗರ, ‘ನೂತನ ಕಾಯ್ದೆ ರದ್ದಾಗುವವರೆಗೂ ಹೋರಾಟ ಮಾಡಲಿದ್ದೇವೆ. ಈ ಕಾನೂನಿನಿಂದ 26 ಕೋಟಿಗೂ ಹೆಚ್ಚು ನೋಂದಾಯಿತ ಮನರೇಗಾ ಕಾರ್ಮಿಕರ ಜೀವನೋಪಾಯಗಳ ಮೇಲೆ ಗಾಢ ಪರಿಣಾಮ ಬೀರುತ್ತದೆ. ಪ್ರಸ್ತುತ ಬಜೆಟ್ನೊಂದಿಗೆ, ಕೇಂದ್ರ ಸರ್ಕಾರವು ಪ್ರತಿ ಮನೆಗೆ ವರ್ಷಕ್ಕೆ 50 ದಿನಗಳ ಕೆಲಸವನ್ನು ಒದಗಿಸಲು ಸಹ ಸಾಧ್ಯವಾಗುತ್ತಿಲ್ಲ. ಈಗ ಹಣ ಹೊಂದಿಸುವ ಹೊಣೆಯನ್ನೂ ರಾಜ್ಯಗಳ ಮೇಲೆ ಹಾಕಿದೆ. 125 ದಿನಗಳ ಕೆಲಸದ ಖಾತರಿ ಇಲ್ಲವಾಗಿದೆ’ ಎಂದು ಆರೋಪಿಸಿದರು.

ಹೈಕೋರ್ಟ್ ವಕೀಲ ಕ್ಲಿಫ್ಟನ್ ಡಿ. ರೊಜಾರಿಯೊ, ‘ಕೇಂದ್ರ ಸರ್ಕಾರ ಜನರ ದುಡಿಯುವ ಹಕ್ಕನ್ನೇ ದೋಚಿದೆ. ಯೋಜನೆಯ ಕಾರ್ಯಭಾರ ಹಂಚಿಕೆಯಲ್ಲಿ ಕೇಂದ್ರಕ್ಕೆ ಹೆಚ್ಚುಗಾರಿಕೆ ನೀಡಲಾಗಿದೆ. ಕೇಂದ್ರೀಕರಣಕ್ಕೆ ಆದ್ಯತೆ ನೀಡುವ ಮೂಲಕ ಒಕ್ಕೂಟ ವ್ಯವಸ್ಥೆ ಧ್ವಂಸಗೊಳಿಸಲು ಮುಂದಾಗಿದೆ’ ಎಂದು ಅಭಿಪ್ರಾಯಪಟ್ಟರು.

ಬೆಳಗಾವಿ ಜಿಲ್ಲೆ ಜಾಗೃತ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುವರ್ಣ ಕುಠಾಳೆ, ‘ನರೇಗಾದಂತಹ ಯೋಜನೆಗಳಿಂದ ಗ್ರಾಮಸಭೆಗಳು ಉಸಿರಾಡುತ್ತಿದ್ದವು. ವಿಬಿ–ಜಿ ರಾಮ್ ಜಿ ಅದನ್ನು ಕೊಲ್ಲುತ್ತದೆ. ಕೃಷಿ ಕೊರತೆಯ ಋತುಗಳಲ್ಲಿ ಮೇಕೆ ಮತ್ತು ಕೋಳಿ ಸಾಕಾಣಿಕೆ ಮಾಡಬಹುದಾಗಿತ್ತು. ಈಗ ಅದು ಸಾಧ್ಯವಾಗದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.