ಆಮ್ಲಜನಕ ಹೆಸರಿನಲ್ಲಿ ₹ 2.97 ಲಕ್ಷ ವಂಚನೆ
ಬೆಂಗಳೂರು: ಆಮ್ಲಜನಕ ಸಾಂದ್ರತೆ ಸಾಧನ, ಕೈಗವಸು ಹಾಗೂ ವಿವಿಧ ವೈದ್ಯಕೀಯ ಉಪಕರಣ ಮಾರಾಟದ ಹೆಸರಿನಲ್ಲಿ ₹ 2.97 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚನ್ನಸಂದ್ರದ ಉದ್ಯಮಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ.
‘ವೈದ್ಯಕೀಯ ಉಪಕರಣ ಖರೀದಿಗಾಗಿ ದೂರುದಾರ ಆನ್‌ಲೈನ್‌ನಲ್ಲಿ ಹುಡುಕಾಡಿದ್ದರು. ಕಂಪನಿಯೊಂದರ ಮಾಹಿತಿ ಪಡೆದು ಉಪಕರಣಗಳಿಗೆ ಬೇಡಿಕೆ ಸಲ್ಲಿಸಿದ್ದರು. ಅದನ್ನು ತಿಳಿದ ವಂಚಕ, ಕಂಪನಿ ಹೆಸರಿನಲ್ಲಿ ದೂರುದಾರರಿಗೆ ಕರೆ ಮಾಡಿದ್ದ. ‘ಉಪಕರಣ ಬೇಕಾದರೆ ಮುಂಗಡ ಹಣ ಪಾವತಿಸಬೇಕು’ ಎಂದಿದ್ದ. ಅದನ್ನು ನಂಬಿದ್ದ ದೂರುದಾರ, ₹ 2.97 ಲಕ್ಷ ಪಾವತಿಸಿದ್ದರು. ನಂತರ, ಆರೋಪಿ ನಾಪತ್ತೆಯಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.