ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ. ನಾ. ಸೋಮೇಶ್ವರ ಅವರಿಗೆ ‘ಪಾಂಚಜನ್ಯ ಪ್ರಶಸ್ತಿ’ ಪ್ರದಾನ

Published : 28 ಸೆಪ್ಟೆಂಬರ್ 2024, 20:29 IST
Last Updated : 28 ಸೆಪ್ಟೆಂಬರ್ 2024, 20:29 IST
ಫಾಲೋ ಮಾಡಿ
Comments

ಬೆಂಗಳೂರು: ‘ರಾಜ್ಯದಲ್ಲಿ  ಅನೇಕ ವೈದ್ಯರಿಗೆ ಕನ್ನಡ ಭಾಷೆ ಬರೆಯುವುದಿರಲಿ, ಸರಿಯಾಗಿ ಓದಲೂ ಬರುವುದಿಲ್ಲ. ಆದರೆ, ಡಾ. ನಾ. ಸೋಮೇಶ್ವರ ಅವರು ವೈದ್ಯಕೀಯ ಕ್ಷೇತ್ರದ ಬಗ್ಗೆ ಕನ್ನಡದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ’ ಎಂದು ಮನೋವೈದ್ಯ ಸಿ.ಆರ್.ಚಂದ್ರಶೇಖರ್‌ ಶ್ಲಾಘಿಸಿದರು.

ಪಾಂಚಜನ್ಯ ಪ್ರತಿಷ್ಠಾನ ಶನಿವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ನಾ.ಸೋಮೇಶ್ವರ ಅವರಿಗೆ ‘ಪಾಂಚಜನ್ಯ ಪ್ರಶಸ್ತಿ–2024’ ಪ್ರದಾನ ಮಾಡಿ ಮಾತನಾಡಿದರು. ಪ್ರಶಸ್ತಿ ₹1 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.

ಕನ್ನಡದ ವೈದ್ಯ ಸಾಹಿತ್ಯ ಕ್ಷೇತ್ರಕ್ಕೆ ಸೋಮೇಶ್ವರ ಅವರ ಕೊಡುಗೆ ಅಪಾರ. ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೂ ಕನ್ನಡ ಪುಸ್ತಕಗಳನ್ನೇ ಕೊಡುಗೆ ನೀಡಿ
ಮಾದರಿಯಾಗಿದ್ದಾರೆ’ ಎಂದರು.

‘ಇಂದು ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಕೊರತೆ ಇದೆ. ಕಟ್ಟಡಗಳು ಸೋರುತ್ತವೆ. ಗೋಡೆಗಳು ಬೆಂಚ್‌, ಡೆಸ್ಕ್‌ಗಳ ಕೊರತೆ ಇದೆ. ‘ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕಿದೆ’ ಎಂದು ಹೇಳಿದರು.

ಲೇಖಕ ನಾ.ಸೋಮೇಶ್ವರ ಮಾತನಾಡಿ, ‘ಪ್ರಶಸ್ತಿ ಸ್ವೀಕಾರದಿಂದ ಕಾರ್ಯಭಾರ ಹೆಚ್ಚಾಗಿದೆ. ’ಥಟ್‌ ಅಂತ ಹೇಳಿ ಕಾರ್ಯಕ್ರಮ 4,750 ಕಂತುಗಳನ್ನು ಪೂರೈಸಿದೆ’
ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT