ಜೈಲಿನಲ್ಲಿ ಗಲಾಟೆ; ಚಮಚದಿಂದ ಚುಚ್ಚಿದ ಕೈದಿ

7

ಜೈಲಿನಲ್ಲಿ ಗಲಾಟೆ; ಚಮಚದಿಂದ ಚುಚ್ಚಿದ ಕೈದಿ

Published:
Updated:

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅ.2ರಂದು ಕೈದಿಗಳ ನಡುವೆ ಗಲಾಟೆ ಆಗಿದ್ದು, ಆ ಸಂಬಂಧ ಅಧೀಕ್ಷಕ ಎಂ.ಸೋಮಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ.

‘ವಿಚಾರಣಾ ಕೈದಿ ಆಜಂವುಲ್ಲಾ ಖಾನ್ ಎಂಬಾತನ ಮೇಲೆ, ಇನ್ನೊಬ್ಬ ಕೈದಿ ಮಹಮ್ಮದ್ ಸಮೀರ್ ಅಲಿಯಾಸ್ ಮುಂಬೈ ಎಂಬಾತ ಹಲ್ಲೆ ಮಾಡಿದ್ದಾನೆ. ಗಾಯಗೊಂಡಿರುವ ಆಜಂವುಲ್ಲಾಗೆ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಸೋಮಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.

’ಜೈಲಿನ ಮೂರನೇ ಬ್ಯಾರಕ್‌ನ 4ನೇ ಕೊಠಡಿಯಲ್ಲಿ ಆಜಂವುಲ್ಲಾ ಖಾನ್‌ನನ್ನು ಇರಿಸಲಾಗಿದೆ. ಅದೇ ಬ್ಯಾರಕ್‌ನ ಮೂರನೇ ಕೊಠಡಿಯಲ್ಲಿದ್ದ ಸಮೀರ್, ಮಾತನಾಡಿಸುವ ನೆಪದಲ್ಲಿ ಆಜಂವುಲ್ಲಾ ಬಳಿ ಹೋಗಿದ್ದ. ಉಪಾಹಾರ ಸೇವಿಸುವ ಚಮಚದಿಂದ ಮುಖಕ್ಕೆ ಚುಚ್ಚಿ ಹಲ್ಲೆ ಮಾಡಿದ್ದ. ಅದನ್ನು ಗಮನಿಸಿದ್ದ ಜೈಲಿನ ಸಿಬ್ಬಂದಿ, ಆತನನ್ನು ಹಿಡಿದು ಕೊಠಡಿಗೆ ಕಳುಹಿಸಿದರು’ ಎಂದು ಹೇಳಿದ್ದಾರೆ.

ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ‘ಹಲ್ಲೆ ಮಾಡಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !