ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಸ್‌ಆರ್‌ಟಿಸಿ ಟ್ರಕ್‌ ‘ನಮ್ಮ ಕಾರ್ಗೊ’ ಸೇವೆ 23ಕ್ಕೆ ಆರಂಭ

Published 20 ಡಿಸೆಂಬರ್ 2023, 14:28 IST
Last Updated 20 ಡಿಸೆಂಬರ್ 2023, 14:28 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿ ಇದೇ ಮೊದಲ ಬಾರಿಗೆ ಪಾರ್ಸೆಲ್‌ ಸೇವೆಗೆ ಟ್ರಕ್‌ಗಳನ್ನು ಬಳಸಲಿದ್ದು, ಡಿ. 23ರಂದು ‘ನಮ್ಮ ಕಾರ್ಗೊ’ ಸೇವೆ ಪ್ರಾರಂಭವಾಗಲಿದೆ.

ಕೆಎಸ್‌ಆರ್‌ಟಿಸಿ 20 ಟ್ರಕ್‌ಗಳನ್ನು ಖರೀದಿಸಿದೆ. ಈ ಟ್ರಕ್‌ಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಪರಿಶೀಲನೆ ನಡೆಸಿದ್ದಾರೆ. ಇಲ್ಲಿವರೆಗೆ ಬಸ್‌ಗಳಲ್ಲಿಯೇ ನೀಡುತ್ತಿದ್ದ ಕಾರ್ಗೊ ಸೇವೆ ಇನ್ನು ಮುಂದೆ ಟ್ರಕ್‌ಗಳಿಗೆ ವಿಸ್ತರಣೆಗೊಳ್ಳಲಿದೆ.

ಆಕರ್ಷಕ ವಿನ್ಯಾಸದ, ಉತ್ತಮ ಗುಣಮಟ್ಟದ ಟ್ರಕ್‌ಗಳನ್ನು ಆರಿಸಲಾಗಿದೆ. ಟಾಟಾ ಕಂಪನಿಯ ಪುಣೆ ಶಾಖೆಯಲ್ಲಿ ಟ್ರಕ್‌ಗಳು ತಯಾರಾಗಿವೆ. ಬಸ್‌ಗಳಲ್ಲಿ ಸಾಗಿಸುವ ಪಾರ್ಸೆಲ್‌ಗಳನ್ನು ಬಸ್‌ ನಿಲ್ದಾಣಗಳಿಗೆ ಬಂದು ಸಂಬಂಧಪಟ್ಟವರು ಒಯ್ಯಬೇಕಿತ್ತು. ಟ್ರಕ್‌ಗಳಲ್ಲಿ ನಿಗದಿತ ಸ್ಥಳಕ್ಕೇ ತಲುಪಲಿಸುವ ಕಾರ್ಯವಾಗಲಿದೆ. ಬಸ್‌ಗಳಲ್ಲಿಯೂ ಪಾರ್ಸೆಲ್‌ ಸೇವೆ ಮುಂದುವರಿಯಲಿದೆ ಎಂದು ವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಮಾಹಿತಿ ನೀಡಿದರು. 

ಬಿಎಂಟಿಸಿಗೆ 100 ಇ–ಬಸ್‌ ಸೇರ್ಪಡೆ

26ಕ್ಕೆ ಕೇಂದ್ರ ಸರ್ಕಾರದ ‘ಫೇಮ್‌–2’ ಯೋಜನೆಯಡಿ ಬಿಎಂಟಿಸಿಗೆ ಗುತ್ತಿಗೆ ಆಧಾರದಲ್ಲಿ 100 ಇ–ಬಸ್‌ಗಳು ಡಿ. 26ಕ್ಕೆ ಸೇರ್ಪಡೆಗೊಳ್ಳಲಿವೆ. ಬಿಎಂಟಿಸಿಗೆ 2024ರ ಮಾರ್ಚ್‌ ಅಂತ್ಯದೊಳಗೆ ಒಟ್ಟು 921 ಇ–ಬಸ್‌ಗಳು ಬರಲಿವೆ. ಅದರಲ್ಲಿ ಮೊದಲ ಹಂತದ ಬಸ್‌ಗಳು ಇವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT