ನೆಲಮಂಗಲ: ‘ಪೋಷಕರು ಮಕ್ಕಳ ಚಲನಚಲನಗಳ ಬಗ್ಗೆ ನಿಗಾ ವಹಿಸಬೇಕು. ಯಾವ ರೀತಿಯ ಸ್ನೇಹಿತರಿದ್ದಾರೆ, ಮಾದಕವಸ್ತುಗಳ ವ್ಯಸನಕ್ಕೊಳಗಾಗಿದ್ದಾರೆಯೇ, ಅಕ್ರಮ ಚಟುವಟಿಕೆಗಳ ಕಡೆ ಆಸಕ್ತಿ ವಹಿಸುತ್ತಿದ್ದಾರೆಯೆ ಎಂದು ಗಮನಹರಿಸಿ ಸಣ್ಣ ವಯಸ್ಸಿನಲ್ಲೇ ತಿದ್ದಬೇಕು’ ಎಂದು ಡಿಐಜಿ ಎಂ.ಎನ್.ಅನುಚೇತ್ ಹೇಳಿದರು.

ಹರ್ಷ ಸಮೂಹ ಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಪ್ರತಿಭಾನ್ವಿತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

‘ಮಕ್ಕಳು ಅಗತ್ಯವಿರುವಷ್ಟು ಮಾತ್ರ ಸಾಮಾಜಿಕ ಜಾಲತಾಣವನ್ನು ಬಳಸಬೇಕು. ಡಿಜಿಟಲ್ ಅರೆಸ್ಟ್, ಸೈಬರ್ ಅಪರಾಧಗಳಿಗೆ ಒಳಗಾಗುವ ಮೊದಲು ತಡೆಯಬೇಕು’ ಎಂದರು.

ಹರ್ಷ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಶಿವಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳ ಆಸಕ್ತಿಗಳಿಗನುಗುಣವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ನಿರ್ದೇಶಕ ಯಶಸ್ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷೆ ಗಿರಿಜಾ, ನಿರ್ದೇಶಕ ಹರ್ಷ, ಪಿಯು ಪ್ರಾಂಶುಪಾಲೆ ಜ್ಯೋತಿ ಕಾಮತ್, ಮುಖ್ಯ ಶಿಕ್ಷಕರಾದ ಬಿಂದು ಶರ್ಮ, ಪ್ರೀತಿ.ಕೆ.ಚೌಧರಿ, ಪೂರ್ಣಿಮಾ ಉಪಸ್ಥಿತರಿದ್ದರು. ಯಕ್ಷಗಾನ, ನಾಟಕ ಸೇರಿದಂತೆ ವಿವಿಧ ಜಾನಪದ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.