ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ರಮ ವಲಸಿಗರು ಪ್ರಾಣಿಗಳು’

Last Updated 17 ಮೇ 2018, 19:11 IST
ಅಕ್ಷರ ಗಾತ್ರ

ವಾಷಿಂಗ್ಟನ್ : ದೇಶದಲ್ಲಿ ಜಾರಿಯಲ್ಲಿರುವ ವಲಸೆ ಕಾನೂನುಗಳನ್ನು ‘ಕೆಲಸಕ್ಕೆ ಬಾರದ್ದು’ ಎಂದು ಜರಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಕ್ರಮ ವಲಸಿಗರನ್ನು ‘ಪ್ರಾಣಿಗಳು’ ಎಂದು ಮೂದಲಿಸಿದ್ದಾರೆ.

ಶ್ವೇತಭವನದಲ್ಲಿ ಕ್ಯಾಲಿಫೋರ್ನಿಯಾ ರಾಜಕೀಯ ನಾಯಕರು ಮತ್ತು ಕಾನೂನು ಜಾರಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಟ್ರಂಪ್‌, ದುರ್ಬಲವಾಗಿರುವ ವಲಸೆ ಕಾನೂನುಗಳನ್ನು ಬಿಗಿಗೊಳಿಸುವುದಾಗಿ ತಿಳಿಸಿದರು.

‘ಹೆಚ್ಚು ಹೆಚ್ಚು ಜನರು ನಮ್ಮ ದೇಶಕ್ಕೆ ಅಕ್ರಮ ವಲಸಿಗರಾಗಿ ಬರುತ್ತಿದ್ದಾರೆ. ನಾವು ಇದನ್ನು ತಡೆಯಲು ಸಾಕಷ್ಟು ಶ್ರಮ ಹಾಕುತ್ತಿದ್ದೇವೆ. ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಹೊರದಬ್ಬಿದರೆ ಅವರು ಮತ್ತೆ ನುಸುಳಿ ಬರುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT