ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಮಾಗಡಿ ರಸ್ತೆಯ ಸುಂಕದಕಟ್ಟೆಯಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ

Published : 10 ಆಗಸ್ಟ್ 2024, 15:36 IST
Last Updated : 10 ಆಗಸ್ಟ್ 2024, 15:36 IST
ಫಾಲೋ ಮಾಡಿ
Comments

ರಾಜರಾಜೇಶ್ವರಿನಗರ: ಮಾಗಡಿ ರಸ್ತೆಯ ಸುಂಕದಕಟ್ಟೆಯಲ್ಲಿರುವ ಸಲ್ಲಾಪುರದಮ್ಮ ಅಕ್ಕ ತಂಗಿ ದೇವಿಯರು, ಮುತ್ತುರಾಯಸ್ವಾಮಿ ಮತ್ತು ಬೋಡುಬಂಡೆ ಆಂಜನೇಯ ದೇವರ ಜಾತ್ರಾ ಮಹೋತ್ಸವ, ಊರ ಹಬ್ಬ ಸಡಗರದಿಂದ ನಡೆಯಿತು.

ಮಹದೇವಮ್ಮ, ಮದ್ದೂರಮ್ಮ, ಪಳೇಕಮ್ಮ ದೇವರಿಗೆ ಆರತಿ ಮತ್ತು ವಿಶೇಷ ಪೂಜೆಗಳು ನಡೆದವು.  ಸಲ್ಲಾಪುರದಮ್ಮ ದೇವಿಗೆ ತಂಬಿಟ್ಟಿನ ಆರತಿ ಮತ್ತು ಅಗ್ನಿಕೊಂಡ ನಡೆಯಿತು. ಸಲ್ಲಾಪುರದಮ್ಮ, ಮುತ್ತುರಾಯ ಸ್ವಾಮಿ, ಬೋಡುಬಂಡೆ ಆಂಜನೇಯ ಸ್ವಾಮಿ ದೇವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು.

ಕೀಲುಕುದುರೆ, ಪಟದ ಕುಣಿತ, ಪೂಜಾ ಕುಣಿತ, ಗೊರವನ ಕುಣಿತ ಸೇರಿದಂತೆ ವಿವಿಧ ಕಲೆಗಳ ಪ್ರದರ್ಶನ ಜರುಗಿದವು. ಸುಂಕದಕಟ್ಟೆ ರಾಜಬೀದಿಗಳಲ್ಲಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಯುವ ಜನರು ಕುಣಿದು ಕುಪ್ಪಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT