ಭಾನುವಾರ, ನವೆಂಬರ್ 17, 2019
23 °C

ಶಾಶ್ವತ ಕೃಷಿ (ಪರ್ಮಕಲ್ಚರ್) ತೋಟ ಮಾತುಕತೆ

Published:
Updated:
ಥಾಯ್ಲೆಂಡ್‌ನ ಮೈಕೇಲ್ ಕಾಮನ್ಸ್

ಶಾಶ್ವತ ಕೃಷಿ (ಪರ್ಮ್‌ಕಲ್ಚರ್) ತೋಟ ಕಟ್ಟುವ ಬಗ್ಗೆ ಥಾಯ್ಲೆಂಡ್‌ನ ಮೈಕೇಲ್ ಕಾಮನ್ಸರ ಜೊತೆ ಮಾತುಕತೆ ಕಾರ್ಯಕ್ರಮವು ಮಲ್ಲೇಶ್ವರದ ಮಂತ್ರಿ ಮಾಲ್‌ ಮೆಟ್ರೊ ಮುಂಭಾಗದ ಗ್ರೀನ್‌ ಪಾತ್‌ನಲ್ಲಿ ನಡೆಯಲಿದೆ.

ಥಾಯ್ಲೆಂಡ್‌ನ ಮೈಕೇಲ್ ಕಾಮನ್ಸ್‌ ಸಾವಯವ ಕೃಷಿ ಚಳುವಳಿಯಲ್ಲಿ ಸಕ್ರಿಯವಾಗಿರುವವರು. ಅಮೆರಿಕಾದ ಕೃಷಿ ಕುಟುಂಬದಲ್ಲಿ ಹುಟ್ಟಿ, ಗಾಂಧಿ ವಿಚಾರಗಳಿಂದ ಪ್ರೇರಣೆ ಪಡೆದು, ಥಾಯ್ಲೆಂಡ್‌ನಲ್ಲಿ ನೆಲೆಸಿ ಶಾಶ್ವತ ಕೃಷಿ ತೋಟ ಕಟ್ಟಿದ್ದಾರೆ. ತಮ್ಮ ಥಾಯ್ ಮಡದಿ ಯೋಕ್ ಅವರ ಜೊತೆಗೂಡಿ ನೈಸರ್ಗಿಕ ಪದಾರ್ಥಗಳ ಮೌಲ್ಯವರ್ಧನೆ ಮಾಡುವ ‘ಯು ಸಬೈ ಗಾರ್ಡನ್’ ಹುಟ್ಟು ಹಾಕಿದ್ದಾರೆ. ವಾತಾವರಣದ ಬದಲಾವಣೆಯೊಂದಿಗೆ ಕೃಷಿ ಮಾಡುವ ವಿಧಾನಗಳ ಮಾದರಿ ರೂಪಿಸಿದ್ದಾರೆ. ಸಾವಯವ ಬೆಳೆಗಾರರ ‘ಗ್ರೀನ್ ನೆಟ್’ ಗುಂಪಿನ ಜೊತೆಗೂಡಿ ರೈತರ ಮಾರುಕಟ್ಟೆಗಳನ್ನು ರೂಪಿಸಿದ್ದಾರೆ.

ಮೈಕೇಲ್ ದಂಪತಿಗಳು ನೈಸರ್ಗಿಕ ಉತ್ಪನ್ನಗಳ ಮೌಲ್ಯವರ್ಧನೆಯ ಪಾಠ ಹೇಳಿಕೊಡಲು ಮೈಸೂರಿಗೆ ಬರಲಿದ್ದಾರೆ. ಈ ಸಂದರ್ಭದಲ್ಲಿ, ಸಹಜ ಆರ್ಗಾನಿಕ್ಸ್‌ ಮತ್ತು ಗ್ರೀನ್ ಪಾತ್ ಸಹಯೋಗದಲ್ಲಿ ಮೈಕೇಲ್‍ರ ಜೊತೆ ಸಂವಾದ ಏರ್ಪಡಿಸಲಾಗಿದೆ. ಶಾಶ್ವತ ಕೃಷಿ ( ಪರ್ಮಕಲ್ಚರ್) ತೋಟ ಕಟ್ಟುವ ಬಗೆಯನ್ನು ಮೈಕೇಲ್ ತಿಳಿಸಿಕೊಡಲಿದ್ದಾರೆ. ಮೌಲ್ಯವರ್ಧನೆಯ ಜಾಣ್ಮೆಯನ್ನು ಯೋಕ್ ಕಲಿಸಿಕೊಡಲಿದ್ದಾರೆ.

ಶಾಶ್ವತ ಕೃಷಿಯ ಮಾದರಿಯನ್ನು ಅಳವಡಿಸಿಕೊಂಡಿರುವ ಬಂಡೀಪುರ ಕಾಡಿನ ‘ಓಪನ್ ಷೆಲ್’ ಫಾರಂನ ಮಾಳವೀಕಾ ಸೊಳಂಕಿಯವರು ಶಾಶ್ವತ ಕೃಷಿಯ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

9 ನೇ ನವೆಂಬರ್ 2019, ಶನಿವಾರ, ಬೆಳಿಗ್ಗೆ 11ಕ್ಕೆ.

ಸ್ಥಳ: ಗ್ರೀನ್ ಪಾತ್, ಮಂತ್ರಿ ಮಾಲ್ ಮೆಟ್ರೊ ಮುಂಭಾಗ, ಮಲ್ಲೇಶ್ವರ. 

ಪ್ರತಿಕ್ರಿಯಿಸಿ (+)