ಗುರುವಾರ , ಜೂನ್ 24, 2021
22 °C

ಮನೆಗೆ ಬಿಟ್ಟು ಬರುವ ನೆಪದಲ್ಲಿ ಮುತ್ತು ಕೇಳಿದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆಗೆ ಬಿಟ್ಟು ಬರುವುದಾಗಿ ಹೇಳಿ ಮಹಿಳೆಯೊಬ್ಬರನ್ನು ಕರೆದುಕೊಂಡು ಹೋದ ವ್ಯಕ್ತಿ, ಮಾರ್ಗ ಮಧ್ಯೆ ‘ಮುತ್ತು’ ಕೊಡುವಂತೆ ಆಕೆಯನ್ನು ಒತ್ತಾಯಿಸಿದ ಘಟನೆ ಬುಧವಾರ ರಾತ್ರಿ ಎಚ್‌ಎಎಲ್‌ ಬಳಿ ನಡೆದಿದೆ! ಇದರಿಂದ ವಿಚಲಿತಗೊಂಡು ಚೀರಾಡಿದ ಮಹಿಳೆಯನ್ನು ಆತ ಅರ್ಧ ದಾರಿಯಲ್ಲೇ ಬಿಟ್ಟು ಹೋಗಿದ್ದಾನೆ.

ಈ ಬಗ್ಗೆ 24ರ ಹರೆಯದ ಮಹಿಳೆ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ಬುಧವಾರ ರಾತ್ರಿ 10.40ರ ಸುಮಾರಿಗೆ ನಾನು ನನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ಮಧ್ಯವಯಸ್ಕ ವ್ಯಕ್ತಿಯೊಬ್ಬ ಬೈಕಿನಲ್ಲಿ ಬಂದ. ಮನೆವರೆಗೆ ಬಿಟ್ಟುಬರುವುದಾಗಿ ಒತ್ತಾಯದಿಂದ ಬೈಕಿ ಹತ್ತಿಸಿಕೊಂಡಿದ್ದ. ಸ್ವಲ್ಪ ದೂರ, ನಿರ್ಜನ ಪ್ರದೇಶದಲ್ಲಿ ಬೈಕ್‌ ಸಾಗುತ್ತಿದ್ದಂತೆ ಮುತ್ತು ಕೊಡುವಂತೆ ಕೇಳಿದ. ನಾನು ತಿರಸ್ಕರಿಸಿ, ಚೀರಾಡಿದಾಗ ನನ್ನನ್ನು ಅಲ್ಲಿಯೇ ಇಳಿಸಿ ಪರಾರಿಯಾಗಿದ್ದಾನೆ. ವ್ಯಕ್ತಿ ಕಂಪನಿಯೊಂದರ ಗುರುತಿನಚೀಟಿ ಧರಿಸಿದ್ದ’ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

‘ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ಪೊಲೀಸರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು